ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನೈಜೀರಿಯಾದಲ್ಲಿ ಅಲ್ ಖಾಯಿದಾ ಇಲ್ಲ: ಮುಸ್ಲಿಂ ಮುಖಂಡರು (Al Qaeda | Nigeria | Muslim leaders | Abuja)
Bookmark and Share Feedback Print
 
ದೇಶದಲ್ಲಿ ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಯಾದ ಅಲ್ ಖಾಯಿದಾ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಆರೋಪವನ್ನು ನೈಜೀರಿಯಾ ಮುಸ್ಲಿಂ ಮುಖಂಡರು ಸಾರಸಗಟಾಗಿ ತಳ್ಳಿಹಾಕಿರುವುದಾಗಿ ಬುಧವಾರ ಮಾಧ್ಯಮವೊಂದರ ವರದಿ ತಿಳಿಸಿದೆ.

ಡಿಸೆಂಬರ್ 25ರಂದು ಆಮ್‌ಸ್ಟರ್‌ಡಂನಿಂದ ಡೆಟ್ರಾಯಿಟ್‌ಗೆ ತೆರಳುತ್ತಿದ್ದ ಅಮೆರಿಕದ ವಿಮಾನವನ್ನು ಧ್ವಂಸಗೊಳಿಸಲು ಯತ್ನಿಸಿದ ಆರೋಪದ ಮೇಲೆ 23ರ ಹರೆಯದ ನೈಜೀರಿಯಾದ ಯುವಕ ಫಾರೂಕ್ ಬಂಧಿತನಾಗಿರುವ ಹಿನ್ನೆಲೆಯಲ್ಲಿ ಅಬುಜಾ ಪತ್ರಿಕೆ ಮುಸ್ಲಿಂ ಮುಖಂಡರನ್ನು ಸಂದರ್ಶಿಸಿದ ವೇಳೆಯಲ್ಲಿ ಈ ಸ್ಪಷ್ಟನೆ ನೀಡಿದ್ದಾರೆ.

ಇದೊಂದು ಪ್ರತ್ಯೇಕ ಪ್ರಕರಣವಾಗಿದೆ, ಬಂಧಿತನಾಗಲಿ ಅಥವಾ ನೈಜೀರಿಯಾದ ಯಾವುದೇ ಧಾರ್ಮಿಕ ಗುಂಪು ಈ ಪ್ರಕರಣದಲ್ಲಿ ಸಂಬಂಧ ಹೊಂದಿಲ್ಲ ಎಂದು ಅಬ್ದುಲ್‌ಫಾಟ್ಟಾಹ್ ಹೇಳಿಕೆಯನ್ನು ಉಲ್ಲೇಖಿಸಿ ವರದಿ ವಿವರಿಸಿದೆ.

'ಈ ಸಮಸ್ಯೆಗೆ ಯಾರು ಕಾರಣರು ಎಂದು ನಾವು ಖಚಿತವಾಗಿ ಹೇಳಲಾರೆವು, ಪ್ರಕರಣದ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸುವಂತೆ ನಾವು ಸಲಹೆ ನೀಡುತ್ತೇವೆ. ಅಲ್ಲದೇ ನೈಜೀರಿಯಾದಲ್ಲಿ ಅಲ್ ಖಾಯಿದಾ ಸಂಘಟನೆ ಯಾವುದೇ ಕಾರ್ಯ ಚಟುವಟಿಕೆ ನಡೆಸುತ್ತಿಲ್ಲ' ಎಂದರು.
ಸಂಬಂಧಿತ ಮಾಹಿತಿ ಹುಡುಕಿ