ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕಿಸ್ತಾನ: ಉಗ್ರ ಮೆಹ್ಸೂದ್ ಬಲಗೈ ಬಂಟನ ಸೆರೆ (Khalillulah | Pakistan | Baitullah Mehsud | Lahore | ISI)
Bookmark and Share Feedback Print
 
ನಿಷೇಧಿತ ಉಗ್ರಗಾಮಿ ಸಂಘಟನೆಯಾದ ತೆಹ್ರೀಕ್ ಇ ತಾಲಿಬಾನ್ ಪಾಕಿಸ್ತಾನ(ಟಿಟಿಪಿ)ದ ಪಂಜಾಬ್ ಪ್ರಾಂತ್ಯದ ವರಿಷ್ಠ ಖಾಲಿಲುಲ್ಲಾನನ್ನು ಪಾಕಿಸ್ತಾನ್ ಭದ್ರತಾ ಪಡೆ ಸೆರೆಹಿಡಿದಿರುವುದಾಗಿ ತಿಳಿಸಿದೆ.

ಖಾಲಿಲುಲ್ಲಾನ ಜೊತೆ ತರಬೇತಿ ಪಡೆದ ಆತ್ಮಹತ್ಯಾ ಬಾಂಬರ್‌ವೊಬ್ಬನನ್ನು ಕೂಡ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದು, ಬಂಧಿತ ಖಾಲಿಲುಲ್ಲಾ ತಾಲಿಬಾನ್ ವರಿಷ್ಠ ಬೈತುಲ್ಲಾ ಮೆಹ್ಸೂದ್‌ನ ಬಲಗೈ ಬಂಟ ಎಂಬುದಾಗಿ ಹೇಳಿಕೊಂಡಿದ್ದಾನೆ.

ಕಂಟೋನ್ಮೆಂಟ್ ವಿಭಾಗೀಯ ಪೊಲೀಸ್ ಮತ್ತು ಗುಪ್ತಚರ ಇಲಾಖೆಯ ಅಧಿಕಾರಿಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಸುಮಾರು 12ದಿನಗಳ ಹಿಂದೆಯೇ ಮಾನ್ವಾನ್ ಪ್ರದೇಶದಲ್ಲಿ ಬಂಧಿಸಲಾಗಿದೆ ಎಂದು ವಿವರಿಸಿದ್ದಾರೆ.

ಕಳೆದ ತಿಂಗಳು ಜನನಿಭಿಡ ಮೂನ್ ಮಾರ್ಕೆಟ್ ಸಮೀಪ ಸಂಭವಿಸಿದ ಅವಳಿ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್ ಆಗಿರುವ ಖಾಲಿಲುಲ್ಲಾ ಬಂಧನದ ನಂತರ ಇಲಾಖೆ ನಡೆಸಿದ ವಿಚಾರಣೆ ವೇಳೆ ಈ ಮಾಹಿತಿಯನ್ನು ಹೊರಗೆಡವಿದ್ದಾನೆ. ಅಲ್ಲದೇ ವಾಘಾ ಗಡಿಯಲ್ಲಿಯೂ ಬಾಂಬ್ ಸ್ಫೋಟ ನಡೆಸುವ ಸಂಚು ರೂಪಿಸಲಾಗಿತ್ತು ಎಂಬುದಾಗಿಯೂ ಬಾಯ್ಬಿಟ್ಟಿದ್ದಾನೆ ಎಂದು ಗುಪ್ತಚರ ಇಲಾಖಾ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ