ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮುಷ್ ಪಾಕ್‌ನಲ್ಲಿ ಜನಪ್ರಿಯತೆ ಸಾಬೀತುಪಡಿಸಲಿ: ಗಿಲಾನಿ (Musharraf | Yousuf Raza Gilani | Islamabad | Pakistan)
Bookmark and Share Feedback Print
 
ದೇಶದಲ್ಲಿ ನಡೆಯಲಿರುವ ಯಾವುದೇ ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಪಾಕ್‌ನಲ್ಲಿ ತಮ್ಮ ಜನಪ್ರಿಯತೆಯನ್ನು ಮಿಲಿಟರಿ ಮಾಜಿ ಸರ್ವಾಧಿಕಾರಿ ಪರ್ವೇಜ್ ಮುಷರ್ರಫ್ ಸಾಬೀತುಪಡಿಸಲಿ ಎಂದು ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಬಹಿರಂಗವಾಗಿ ಸವಾಲು ಹಾಕಿದ್ದಾರೆ.

ಬುಧವಾರ ಗ್ವಾಡರ್ ಬಂದರು ನಗರದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಷರ್ರಫ್ ಅವರು ದೇಶದ ಯಾವುದೇ ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ತಮ್ಮ ಜನಪ್ರಿಯತೆ ಮತ್ತು ತಮ್ಮ ನೈಜ ವ್ಯಕ್ತಿತ್ವವನ್ನು ಸಾಬೀತುಪಡಿಸಲಿ ಎಂದು ಯೂಸೂಫ್ ಆಗ್ರಹಿಸಿದರು.

ಅಲ್ಲದೇ ಮುಷರ್ರಫ್ ಅವರು ಪಾಕಿಸ್ತಾನದ ಸಂವಿಧಾನ ವಿಧಿವಿಧಾನಗಳನ್ನೇ ಉಲ್ಲಂಘಿಸಿದ್ದಾರೆ ಮತ್ತು ಅವರು ಅದಕ್ಕೆ ತಕ್ಕ ಬೆಲೆ ತೆರಲೇಬೇಕು ಎಂದು ಎಚ್ಚರಿಕೆ ನೀಡಿದರು.

ತಮ್ಮ ಆಡಳಿತಾವಧಿಯುದ್ದಕ್ಕೂ ಸರ್ವಾಧಿಕಾರಿಯಂತೆ ವರ್ತಿಸಿದ ಮುಷರ್ರಫ್ ಅವರು ಭ್ರಷ್ಟಾಚಾರ ನಡೆಸಿ ಆಡಳಿತಶಾಹಿಯನ್ನು ದುರ್ಬಳಕೆ ಮಾಡಿಕೊಂಡು ಅಕ್ರಮ ಎಸಗಿದ್ದಾರೆ ಎಂದು ಗಿಲಾನಿ ಆರೋಪಿಸಿದರು.
ಸಂಬಂಧಿತ ಮಾಹಿತಿ ಹುಡುಕಿ