ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಯುಎಸ್ ವಿಮಾನ ಧ್ವಂಸ ಯತ್ನ: ಗುಪ್ತಚರ ಇಲಾಖೆ ವೈಫಲ್ಯ (Obama | Barack Obama | Intelligence | Christmas Day | Washington)
Bookmark and Share Feedback Print
 
ಕ್ರಿಸ್‌ಮಸ್ ದಿನವಾದ ಡಿಸೆಂಬರ್ 25ರಂದು ಅಮೆರಿಕದ ವಿಮಾನವನ್ನು ಧ್ವಂಸಗೊಳಿಸುವ ವಿಫಲ ಯತ್ನ ನಡೆಸಿರುವ ಘಟನೆ ಕುರಿತು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಗುರುವಾರ ಪ್ರಾಥಮಿಕ ವರದಿಯನ್ನು ಸ್ವೀಕರಿಸಿದ್ದು, ಇದು ಗುಪ್ತಚರ ಇಲಾಖೆಯ ವೈಫಲ್ಯ ಎಂದು ತಿಳಿಸಿದ್ದಾರೆ.

ನೈಜೀರಿಯಾದ ಶಂಕಿತ ಅಲ್ ಖಾಯಿದಾ ಉಗ್ರ ಉಮರ್ ಫಾರೂಕ್ ಅಮೆರಿಕದ ವಿಮಾನ ಧ್ವಂಸಗೊಳಿಸಲು ಯತ್ನಿಸಿದ ಘಟನೆ ಕುರಿತಂತೆ ಶೀಘ್ರವೇ ತನಿಖೆ ನಡೆಸಿ ವರದಿ ನೀಡುವಂತೆ ಒಬಾಮ ಆದೇಶಿಸಿದ್ದರು.ಈ ಬಗ್ಗೆ ಮೊದಲ ವರದಿಯನ್ನು ಮಂಗಳವಾರ ಅಧಿಕಾರಿಗಳು ನೀಡಿದ್ದರು.

ಹೊಸ ವರ್ಷಾಚರಣೆ ಅಂಗವಾಗಿ ಹವಾಯ್ ಪ್ರವಾಸದಲ್ಲಿರುವ ಬರಾಕ್ ಇಂದು ಎರಡನೇ ವರದಿಯನ್ನು ಸ್ವೀಕರಿಸಿದರು. ಘಟನೆ ಕುರಿತಂತೆ ನೈಜೀರಿಯಾದ ಯುವಕನ ಹೆಸರನ್ನು ಉಲ್ಲೇಖಿಸಲಾಗಿದ್ದು, ಘಟನೆ ನಡೆಯಲು ಗುಪ್ತಚರ ಇಲಾಖೆ ವಿಫಲವೇ ಕಾರಣ ಎಂದು ಹೇಳಲಾಗಿದೆ.

ನೈಜೀರಿಯಾ ಯುವಕ ಉಮರ್ ಅಮೆರಿಕ ವಿಮಾನವನ್ನು ಧ್ವಂಸಗೊಳಿಸಲು ಯತ್ನಿಸಿದ ಘಟನೆ ಗುಪ್ತಚರ ಇಲಾಖೆ ವ್ಯವಸ್ಥೆಯಲ್ಲಿನ ಲೋಪ ಎಂಬ ಹೇಳಿಕೆಯನ್ನು ಒಬಾಮ ತಳ್ಳಿಹಾಕಿದ್ದರು.
ಸಂಬಂಧಿತ ಮಾಹಿತಿ ಹುಡುಕಿ