ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ವಿದೇಶಿ ಕರೆನ್ಸಿಗಳ ಬಳಕೆಗೆ ಉತ್ತರ ಕೊರಿಯಾ ನಿಷೇಧ (North Korea | Foreign currency | Communist govt | economy)
Bookmark and Share Feedback Print
 
ದೇಶದ ಅಪಕ್ವ ಹಣಕಾಸು ಮಾರುಕಟ್ಟೆಯ ಮೇಲೆ ಕಮ್ಯೂನಿಸ್ಟ್ ಸರಕಾರ ಹಿಡಿತ ಬಲಗೊಳಿಸುವ ನಿಟ್ಟಿನಲ್ಲಿ ಕಠಿಣ ನಿರ್ಧಾರವೊಂದನ್ನು ಕೈಗೊಂಡಿರುವ ಉತ್ತರ ಕೊರಿಯಾ, ದೇಶದಲ್ಲಿ ವಿದೇಶಿ ಕರೆನ್ಸಿ ಬಳಸುವುದರ ಮೇಲೆ ನಿಷೇಧ ಹೇರಿದೆ.

ಅಮೆರಿಕನ್ ಡಾಲರುಗಳು, ಯೂರೋಗಳು, ಯೆನ್ ಮತ್ತು ಉತ್ತರ ಕೊರಿಯನೇತರ ಕರೆನ್ಸಿಗಳನ್ನು ಯಾರಾದರೂ ಬಳಸಿದಲ್ಲಿ ಅವರ ಮೇಲೆ ಕಠಿಣಾತಿ ಕಠಿಣ ಶಿಕ್ಷೆಗಳನ್ನು ವಿಧಿಸುವುದಾಗಿ ಸರಕಾರ ಎಚ್ಚರಿಕೆ ನೀಡಿದೆ ಎಂದು ವರದಿಗಳು ಹೇಳಿವೆ.

ಇಲ್ಲಿ ಈ ಮೊದಲು ವಿದೇಶಿ ಕರೆನ್ಸಿಗಳನ್ನು ಅಂಗಡಿ-ಮಳಿಗೆಗಳಲ್ಲಿ, ರೆಸ್ಟಾರೆಂಟ್‌ಗಳಲ್ಲಿ ಮತ್ತು ಇತರೆಡೆ ಸ್ವೀಕರಿಸಲಾಗುತ್ತಿತ್ತು. ಅದರಲ್ಲೂ ವಿದೇಶಿಯರಿಗೆ ಸೇವೆ ನೀಡುವ ನಿಟ್ಟಿನಲ್ಲಿ ಈ ಸೌಲಭ್ಯವನ್ನು ಒದಗಿಸಲಾಗುತ್ತಿತ್ತು.

ಉತ್ತರ ಕೊರಿಯಾ ರಾಷ್ಟ್ರೀಯ ಭದ್ರತಾ ವಿಭಾಗವು ಈ ಆದೇಶವನ್ನು ನೀಡಿದ್ದು, ಜನವರಿ 1ರಿಂದ ಜಾರಿಗೆ ಬರಲಿದೆ.

ವಿದೇಶಿ ನೋಟುಗಳ ಚಲಾವಣೆಯನ್ನು ತಡೆಗಟ್ಟಲು ಈ ಕ್ರಮಕ್ಕೆ ಸರಕಾರ ಮುಂದಾಗಿದೆ ಎಂದು ಚೀನಾದ ರಾಷ್ಟ್ರೀಯ ಸಿಸಿಟಿವಿ ದೂರದರ್ಶನವೂ ತನ್ನ ವಿವರವಾದ ವರದಿಯಲ್ಲಿ ಬುಧವಾರ ತಿಳಿಸಿದೆ.

ವೈಯಕ್ತಿಕ ಮತ್ತು ಸಂಘಟನೆಗಳು ವಿದೇಶಿ ಕರೆನ್ಸಿಗಳನ್ನು ಬಳಸುವುದನ್ನು ಈ ನಿಯಮ ತಡೆಯುತ್ತದೆ. ಆದರೆ ಬ್ಯಾಂಕುಗಳು ವಿದೇಶಿ ಕರೆನ್ಸಿಗಳ ವ್ಯವಹಾರ ಮಾಡಬಹುದಾಗಿದೆ ಎಂದು ಸಿಯೋಲ್ ಮೂಲದ ಆನ್‌ಲೈನ್ ಮಳಿಗೆಯೊಂದು ತಿಳಿಸಿದೆ.

ಈ ನಿಷೇಧದ ಕುರಿತು ಉತ್ತರ ಕೊರಿಯಾ ರಾಷ್ಟ್ರೀಯ ಮಾಧ್ಯಮಗಳು ಯಾವುದೇ ವರದಿಯನ್ನು ಮಾಡಿಲ್ಲ. ಆದರೆ ದಕ್ಷಿಣ ಕೊರಿಯಾದ ಅಧಿಕಾರಿಗಳು ಸಿಯೋಲ್ ನಿರ್ಧಾರವನ್ನು ಖಚಿತಪಡಿಸಿದ್ದು, ಅಧಿಕೃತವಾಗಿ ಮಾಧ್ಯಮಗಳಿಗೆ ಪ್ರಕಟಣೆ ಹೊರಡಿಸದ ಹೊರತು ಪ್ರಮುಖ ವಿಚಾರಗಳನ್ನು ಹಂಚಿಕೊಳ್ಳಲು ಹಕ್ಕಿಲ್ಲದೆ ಇರುವ ಕಾರಣ ಇದುವರೆಗೆ ಬಹಿರಂಗಗೊಂಡಿಲ್ಲ ಎಂದು ಹೇಳಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ