ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಶಾಂತಿ ಮಾತುಕತೆ ಸಂಧಾನಕಾರರಾಗಿ: ಇಮ್ರಾನ್‌ಗೆ ತಾಲಿಬಾನ್ (Tehrik-e-Insaaf | Pakistan | Taliban | Imran Khan)
Bookmark and Share Feedback Print
 
ಪಾಕಿಸ್ತಾನ ಸರ್ಕಾರ ಜೊತೆಗೆ ಸಂಧಾನಕಾರರಾಗಿ ಮಾತುಕತೆ ನಡೆಸುವಂತೆ ಪಾಕಿಸ್ತಾನ್ ತಾಲಿಬಾನ್ ಕಮಾಂಡರ್ ತನ್ನನ್ನು ಸಂಪರ್ಕಿಸಿರುವುದಾಗಿ ಮಾಜಿ ಕ್ರಿಕೆಟಿಗ, ರಾಜಕಾರಣಿ ಇಮ್ರಾನ್ ಖಾನ್ ಅವರು ತಿಳಿಸಿದ್ದಾರೆ.

ತಮ್ಮ ಪರವಾಗಿ ಸರ್ಕಾರದ ಜೊತೆ ಶಾಂತಿ ಮಾತುಕತೆ ನಡೆಸುವ ಕುರಿತು ತಾಲಿಬಾನ್ ಕಮಾಂಡರ್ ತನ್ನನ್ನು ಸಂಪರ್ಕಿಸಿರುವುದಾಗಿ ಹೇಳಿದ್ದಾರೆ. ಆದರೆ ತಾನು ಕೇವಲ ಸರ್ಕಾರದ ಸಮ್ಮತಿ ಮೇರೆಗೆ ಮಾತ್ರ ಮಧ್ಯವರ್ತಿ ಕೆಲಸ ಮಾಡುವುದಾಗಿ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಖಾನ್, ತಾಲಿಬಾನ್ ಮುಖಂಡ ಯಾವ ರೀತಿಯಲ್ಲಿ ಖಾನ್ ಅವರನ್ನು ಸಂಪರ್ಕಿಸಿದ್ದ ಎಂಬ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ.

ಮಾಜಿ ಕ್ರಿಕೆಟಿಗರಾಗಿರುವ ಇಮ್ರಾನ್ ಖಾನ್ ತೆಹ್ರಿಕ್ ಇ ಇನ್ಸಾಫ್ ಪಕ್ಷದ ವರಿಷ್ಠರಾಗಿದ್ದಾರೆ. ತಾಲಿಬಾನ್ ಮತ್ತು ಉಳಿದ ಉಗ್ರಗಾಮಿ ಸಂಘಟನೆಗಳ ವಿರುದ್ಧ ಮಿಲಿಟರಿ ಕಾರ್ಯಾಚರಣೆ ನಡೆಸುವುದನ್ನು ಖಾನ್ ತೀವ್ರವಾಗಿ ವಿರೋಧಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ