ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಚೀನಾ: ಹಿರಿಯ ಬೌದ್ಧ ಗುರುಗೆ ಜೈಲು ಶಿಕ್ಷೆ (Tibet | China | lama | Buddhist leader | Phurbu Tsering)
Bookmark and Share Feedback Print
 
ಅಕ್ರಮವಾಗಿ ಭೂಮಿ ವಶಪಡಿಸಿಕೊಂಡ ಹಾಗೂ ಶಸ್ತ್ರಾಸ್ತ್ರ ಹೊಂದಿರುವ ಆರೋಪದ ಮೇಲೆ ಟಿಬೆಟ್‌ನ ಗೌರವಾನ್ವಿತ ಲಾಮಾಗೆ ಚೀನಾ ಎಂಟೂವರೆ ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.

ಟಿಬೆಟ್ ರಾಜಧಾನಿಯಲ್ಲಿ 2008ರಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಭೀರ ಆರೋಪದ ಮೇಲೆ ಜೈಲು ಶಿಕ್ಷೆ ಪಡೆದುಕೊಂಡ ಮೊದಲ ಹಿರಿಯ ಬೌದ್ಧ ಗುರು ಇವರಾಗಿದ್ದಾರೆಂದು ಹೇಳಲಾಗಿದೆ.

ಪ್ರಕರಣದ ವಿಚಾರಣೆ ನಡೆಸಿದ ಚೀನಾ ಕೋರ್ಟ್ ಟಿಬೆಟ್‌ನ ನೈರುತ್ಯ ಪ್ರಾಂತ್ಯದ ಸಿಚುವಾನ್ ನಿವಾಸಿಯಾಗಿರುವ ಫುರುಬು ತ್ಸೆರಿಂಗ್ ರಿಂಪೋಂಚೆ ಅವರಿಗೆ ಶಿಕ್ಷೆ ನೀಡಿದೆ. ರಿಂಪೋಂಚೆ ಅವರು ಬೌದ್ಧ ಗುರು ಅಥವಾ ಲಾಮಾ ಆಗಿದ್ದು ಬೌದ್ಧ ಧರ್ಮಿಯರ ಶ್ರೇಷ್ಠ ಗುರುವಾಗಿದ್ದಾರೆ. ಅವರನ್ನು 2008 ಮೇ 18ರಂದು ಬಂಧಿಸಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ