ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬ್ರಿಟನ್‌: ಸಿಕ್ ಜಡ್ಜ್ ಮೋಟಾ ಸಿಂಗ್‌ಗೆ 'ನೈಟ್‌ಹುಡ್' ಗರಿ (Indian | NRI | Knighthood | Judge | London | Sikh)
Bookmark and Share Feedback Print
 
ಬ್ರಿಟನ್‌ನ ಮೊದಲ ಏಷ್ಯನ್ ಹಾಗೂ ಸಿಕ್ ನ್ಯಾಯಾಧೀಶರಾಗಿರುವ ಮೋಟಾ ಸಿಂಗ್ ಅವರಿಗೆ ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಅವರು ಪ್ರತಿಷ್ಠಿತ ನೈಟ್‌ಹುಡ್ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಈ ಮೂಲಕ ಸಿಂಗ್ ನೈಟ್ ಹುಡ್ ಪಡೆದ ಮೊದಲ ಸಿಂಗ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಲಂಡನ್ ನಿವಾಸಿಯಾಗಿರುವ ಸಿಂಗ್ ಅವರು ಎಲಿಜಬೆತ್ ರಾಣಿಯ ಓರ್ವ ಸಲಹೆಗಾರರು ಆಗಿದ್ದಾರೆ. ನ್ಯಾಯದಾನ, ಸಮುದಾಯ ಬಾಂಧವ್ಯ ಮತ್ತು ಸ್ವಯಂಸೇವಾ ರಂಗಕ್ಕೆ ನೀಡಿರುವ ಉತ್ತಮ ಸಾಧನೆಗಾಗಿ ಸಿಂಗ್ ಅವರಿಗೆ ನೈಟ್‌ಹುಡ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ರಾಮಗಢ ಮೂಲದ ಮೋಟಾ ಸಿಂಗ್ ಅವರು ಬೆಳೆದದ್ದು, ವಿದ್ಯಾಭ್ಯಾಸ ಪಡೆದದ್ದು ಕೀನ್ಯಾದ ನೈರೋಬಿಯಾದಲ್ಲಿ. 1954ರಲ್ಲಿ ಅವರು ಕಾನೂನು ಶಿಕ್ಷಣ ಪಡೆಯಲು ಇಂಗ್ಲಂಡ್‌ಗೆ ಸ್ಥಳಾಂತರಗೊಂಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ