ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ತಾಲಿಬಾನ್ ದಾಳಿಗೆ ಸಿಐಎನ 7ಮಂದಿ ಬಲಿ (CIA | Afghan attack | Leon Panetta | Taliban)
Bookmark and Share Feedback Print
 
ಅಫ್ಘಾನಿಸ್ತಾನದಲ್ಲಿನ ಸಿಐಎ ನೆಲೆ ಮೇಲೆ ಉಗ್ರಗಾಮಿಗಳು ನಡೆಸಿದ ಆತ್ಮಹತ್ಯಾ ದಾಳಿಯಲ್ಲಿ ಏಳು ಮಂದಿ ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿದ್ದಾರೆ. ಇದರಲ್ಲಿ ಸಿಐಎನ ಮುಖ್ಯಸ್ಥರೊಬ್ಬರು ಕೂಡ ಸಾವನ್ನಪ್ಪಿರುವುದಾಗಿ ವರದಿಯೊಂದು ತಿಳಿಸಿದೆ.

ಬುಧವಾರ ಖೋಸ್ಟ್ ಪ್ರದೇಶದಲ್ಲಿನ ಸಿಐಎ ನೆಲೆ ಮೇಲೆ ಉಗ್ರಗಾಮಿಗಳು ನಡೆಸಿದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಸಂಸ್ಥೆಯ ಅಧಿಕಾರಿಯೊಬ್ಬರು ಸೇರಿದಂತೆ ಏಳು ಮಂದಿ ಸಾವನ್ನಪ್ಪಿರುವುದಾಗಿ ಸಿಐಎ ನಿರ್ದೇಶಕ ಲಿಯೋನ್ ಪನೆಟ್ಟಾ ವಿವರಿಸಿದ್ದಾರೆ. ಈ ದಾಳಿಯ ಹೊಣೆಯನ್ನು ತಾಲಿಬಾನ್ ಹೊತ್ತುಕೊಂಡಿದೆ.

ಈ ದಾಳಿಯಲ್ಲಿ ಎಂಟು ಮಂದಿ ಅಮೆರಿಕನ್ ಪ್ರಜೆಗಳು ಕೂಡ ಬಲಿಯಾಗಿದ್ದಾರೆಂದು ಪ್ರಾಥಮಿಕ ವರದಿಗಳು ತಿಳಿಸಿವೆಯಾದರು ಕೂಡ, ಪೆನೆಟ್ಟಾ ಅವರ ಸಂದೇಶದಲ್ಲಿ ಆ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ(ಸಿಐಎ) ಇತಿಹಾಸದಲ್ಲಿಯೇ ಇಂತಹ ಕ್ರೂರ ಕೃತ್ಯ ನಡೆದಿರಲಿಲ್ಲವಾಗಿತ್ತು ಎಂದು ಸಿಐಎ ತಿಳಿಸಿದೆ.

ಸಿಐಎ ಮೇಲೆ ಯಾವತ್ತೂ ಈ ಮಟ್ಟದ ದಾಳಿ ನಡೆದಿರಲಿಲ್ಲವಾಗಿತ್ತು ಎಂದು ಹೇಳಿರುವ ಪೆನೆಟ್ಟಾ ಇದೊಂದು ದೊಡ್ಡ ಆಘಾತಕಾರಿ ವಿಷಯ ಎಂದು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ