ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಮೆರಿಕ ಮಿಸೈಲ್ ದಾಳಿಗೆ 3 ಉಗ್ರರು ಬಲಿ (America | Pakistan | US missile strike | Waziristan,)
Bookmark and Share Feedback Print
 
ಉತ್ತರ ವಜೀರಿಸ್ತಾನದ ಬುಡಕಟ್ಟು ಪ್ರದೇಶದಲ್ಲಿ ಶುಕ್ರವಾರ ಅಮೆರಿಕ ಮಿಸೈಲ್ ದಾಳಿಯಲ್ಲಿ ಮೂರು ಮಂದಿ ಶಂಕಿತ ಉಗ್ರರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಸ್ಲಿಂ ಉಗ್ರಗಾಮಿ ಜಾಲ ಹೊಂದಿರುವ ವಾಯುವ್ಯ ಪ್ರಾಂತ್ಯದಲ್ಲಿ ಮಿಸೈಲ್ ದಾಳಿ ಕೈಗೊಳ್ಳಲಾಗಿದೆ. ಬುಡಕಟ್ಟು ಪ್ರದೇಶದಲ್ಲಿನ ಉಗ್ರರನ್ನು ಮಟ್ಟಹಾಕುವಲ್ಲಿ ಪಾಕಿಸ್ತಾನ ವಿಫಲವಾಗಿರುವ ಹಿನ್ನೆಲೆಯಲ್ಲಿ ಅಮೆರಿಕ ಉಗ್ರರ ವಿರುದ್ಧ ಈ ದಾಳಿಯನ್ನು ಕೈಗೊಂಡಿದೆ ಎಂದು ಹೇಳಿದೆ.

ಮುಖ್ಯ ನಗರವಾಗಿರುವ ಉತ್ತರ ವಜೀರಿಸ್ತಾನ್ ಮತ್ತು ಅಫ್ಘಾನ್ ಗಡಿಭಾಗದ ಪೂರ್ವ ಮಿರಾನ್‌ಶಾಹ ಪ್ರದೇಶದ ಗುಂಡಿಕಾಲಾ ಹಳ್ಳಿಯ ಸಮೀಪ ಇಂದು ಬೆಳಿಗ್ಗೆ ನಡೆಸಿದ ವೈಮಾನಿಕ ದಾಳಿಯಲ್ಲಿ ಶಂಕಿತ ಮೂರು ಮಂದಿ ಉಗ್ರರು ಹತರಾಗಿದ್ದಾರೆ.

ಎರಡು ಅಮೆರಿಕ ಮಿಸೈಲ್ ದಾಳಿಯಲ್ಲಿ ಮೂರು ಉಗ್ರರು ಹತರಾಗಿರುವುದಾಗಿ ಹಿರಿಯ ಭದ್ರತಾ ಅಧಿಕಾರಿಗಳು ವಿವರಿಸಿದ್ದಾರೆ. ಮೃತ ಉಗ್ರರು ಯಾವ ಸಂಘಟನೆಗೆ ಸೇರಿದವರು ಎಂಬುದು ತಿಳಿದು ಬಂದಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ