ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪ್ರವಾದಿ ಚಿತ್ರಕಾರನ ಮೇಲೆ ಉಗ್ರನಿಂದ ದಾಳಿ ಯತ್ನ (Danish cartoonist | Terror links | Prophet Mohammed | Kurt Westergaard)
Bookmark and Share Feedback Print
 
ಪ್ರವಾದಿ ಮೊಹಮ್ಮದ್ ಅವರ ವ್ಯಂಗ್ಯಚಿತ್ರಗಳನ್ನು ಬಿಡಿಸಿ ಮುಸ್ಲಿಮರ ಕೋಪಕ್ಕೆ ತುತ್ತಾಗಿದ್ದ ಡ್ಯಾನಿಷ್ ಕಾರ್ಟೂನಿಸ್ಟ್ ಮನೆಗೆ ಶಸ್ತ್ರಧಾರಿಯಾಗಿ ನುಗ್ಗಿ ದಾಳಿ ಮಾಡಲೆತ್ನಿಸಿದ ಸೋಮಾಲಿ ಪ್ರಜೆಯೊಬ್ಬನನ್ನು ಪೊಲೀಸರು ಬಂಧಿಸಿದ್ದು, ಆತ ಇಸ್ಲಾಮಿಕ್ ತೀವ್ರವಾದಿಗಳೊಂದಿಗೆ ಸಂಬಂಧ ಹೊಂದಿದ್ದ ಎಂದು ತಿಳಿಸಿದ್ದಾರೆ.

ಬಂಧಿತ 28ರ ಹರೆಯದ ಸೋಮಾಲಿಯಾ ಪ್ರಜೆ ಭಯೋತ್ಪಾದನಾ ಕೃತ್ಯವೆಸಗುವತ್ತ ಸಾಗುತ್ತಿದ್ದ. ಅಮೆರಿಕಾ ಮೇಲಿನ 9/11 ದಾಳಿಯ ಹೊಣೆ ಹೊತ್ತು ಕೊಂಡಿರುವ ಆಲ್‌ಖೈದಾ ಮತ್ತು ಸೋಮಾಲಿ ಶೇಬಾಬ್ ಚಳುವಳಿ ಜತೆ ಆರೋಪಿ ಸಂಬಂಧ ಹೊಂದಿರುವುದು ತನಿಖೆಯ ಸಂದರ್ಭದಲ್ಲಿ ತಿಳಿದು ಬಂದಿದೆ ಎಂದು ಡೆನ್ಮಾರ್ಕ್ ಆಂತರಿಕ ಭದ್ರತಾ ಸೇವೆ ಪೆಟ್ ತನ್ನ ಹೇಳಿಕೆಯಲ್ಲಿ ವಿವರಣೆ ನೀಡಿದೆ.

ಪ್ರವಾದಿ ಮೊಹಮ್ಮದ್ ಅವರ ಹಲವಾರು ಕಾರ್ಟೂನ್‌ಗಳನ್ನು ಬಿಡಿಸಿದ್ದ ಡೆನ್ಮಾರ್ಕ್‌ನ ಕುರ್ತ್ ವೆಸ್ಟರ್‌ಗಾರ್ಡ್ ಎಂಬವರ ಮೇಲೆ ಇದುವರೆಗೆ ಹಲವು ದಾಳಿ ಯತ್ನಗಳು ನಡೆದಿವೆ.

ಪ್ರವಾದಿಯವರು ರುಮಾಲು ಸುತ್ತಿಕೊಂಡಿರುವ ಚಿತ್ರವನ್ನು ಬಾಂಬ್‌ನಂತೆ ಚಿತ್ರಿಸಿರುವುದು ಮುಸ್ಲಿಮ್ ಧರ್ಮೀಯರಿಗೆ ಅಪಥ್ಯವಾದ ಕಾರಣ ಕಳೆದ ನಾಲ್ಕು ವರ್ಷಗಳಿಂದ ಭಾರೀ ಪ್ರತಿಭಟನೆಗಳು ಹಾಗೂ ಕೊಲೆ ಬೆದರಿಕೆಗಳು ಕುರ್ತ್ ಅವರಿಗೆ ಬಂದಿವೆ ಎಂದು ವರದಿಗಳು ಹೇಳಿವೆ.

ನಾನು ನನ್ನ ಕೊಠಡಿಯನ್ನು ಸೇರಿಕೊಂಡು ಬಾಗಿಲು ಮುಚ್ಚಿಕೊಂಡು ಒಳಗೆ ಸುರಕ್ಷಿತವಾಗಿದ್ದೆ. ಆದರೆ ಆತ ಮನೆಯ ಪ್ರಧಾನ ದ್ವಾರವನ್ನು ಮಚ್ಚಿನಿಂದ ಕಡಿದು ಮುರಿಯಲು ಯತ್ನಿಸಿದ ಎಂದು ಐದರ ಹರೆಯದ ಮೊಮ್ಮಗನೊಂದಿಗೆ ಮನೆಯಲ್ಲಿ ವಾಸಿಸುತ್ತಿರುವ 74ರ ಹರೆಯದ ಕುರ್ತ್ ವಿವರಿಸಿದ್ದಾರೆ.

ಈ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಗಳು ಎಚ್ಚೆತ್ತುಕೊಂಡು ಮನೆಯನ್ನು ಪ್ರವೇಶಿಸಲು ಯತ್ನಿಸುತ್ತಿದ್ದ ದಾಳಿಕೋರನನ್ನು ಹೊಡೆದುರುಳಿಸಿದರು. ಗುಂಡೇಟಿನಿಂದ ಗಾಯಗೊಂಡ ಆತನನ್ನೀಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತ ಮಚ್ಚು ಸೇರಿದಂತೆ ಹಲವು ಮಾರಕ ಆಯುಧಗಳನ್ನು ಹೊಂದಿದ್ದ ಎಂದು ಮೂಲಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ