ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 'ದೊಡ್ಡಣ್ಣ'ನ ನಿದ್ದೆಗೆಡಿಸಿದ ಕ್ಯೂಬಾ ಕ್ರಾಂತಿಗೆ 51 ವರ್ಷ (Cuba | Revolution | Fidel Castro | Havana | US)
Bookmark and Share Feedback Print
 
PTI
ಕಮ್ಯೂನಿಷ್ಟ್ ಆಡಳಿತಾರೂಢ ದ್ವೀಪ ಪ್ರದೇಶವಾದ ಕ್ಯೂಬಾ ಶುಕ್ರವಾರ ತನ್ನ ಕ್ರಾಂತಿಯ 51ನೇ ವರ್ಷಾಚರಣೆಯನ್ನು ಸಾಂಪ್ರದಾಯಿಕ ನೃತ್ಯದ ಮೂಲಕ ಆಚರಿಸಿತು.

ಕ್ರಾಂತಿಯ ಮೂಲಕ ಸ್ವಾತಂತ್ರ್ಯ ಪಡೆಯುವ ಮುನ್ನ 1959ರಲ್ಲಿ ಕ್ಯೂಬಾದ ಜೀವನ ಮತ್ತು ಸ್ಥಿತಿಗತಿಯ ಕುರಿತು ರಾಷ್ಟ್ರಸ್ವಾಮ್ಯದ ದಿನಪತ್ರಿಕೆಯಾದ ಗ್ರಾನ್ಮಾ ವಿವರವಾದ ವರದಿ ಪ್ರಕಟಿಸಿದ್ದು, ಸರ್ವಾಧಿಕಾರಿ ಫ್ಲುಜಿನ್ಸಿಯೋ ಬಾಟಿಸ್ತಾನ ಆಡಳಿತವನ್ನು ಮಾಜಿ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೋ ಅವರ ಸಶಸ್ತ್ರ ಕ್ರಾಂತಿಯ ಮೂಲಕ ಕೊನೆಗಾಣಿಸಲಾಯಿತು ಎಂದು ಹೇಳಿದೆ.

ಕಳೆದ ವರ್ಷ ಕ್ರಾಂತಿಯ 50ನೇ ವಾರ್ಷಿಕೋತ್ಸವ ಆಚರಣೆಯ ಸಂದರ್ಭ ಕ್ಯೂಬಾ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಆದರೆ ಈ ಬಾರಿ ಅಂತಹ ಯಾವುದೇ ಕಾರ್ಯಕ್ರಮ ನಡೆದಿಲ್ಲ. 51ನೇ ವರ್ಷಾಚರಣೆ ಅಂಗವಾಗಿ ಅಧ್ಯಕ್ಷ ರೌಲ್ ಕ್ಯಾಸ್ಟ್ರೋ ಸಾರ್ವಜನಿಕರಿಗೆ ಸಂದೇಶ ನೀಡುವ ಸಾಧ್ಯತೆ ಇದೆ ಎಂದು ತಿಳಿಸಿದೆ.

ಕ್ಯೂಬಾದ ಬೀದಿ,ಬೀದಿಗಳಲ್ಲಿ ಕ್ರಾಂತಿಯ ಗೀತೆಗಳ ಸಂಗೀತ, ಕ್ಯೂಬಾ ಬಾವುಟಗಳನ್ನು ಹಾರಿಸಲಾಗಿತ್ತು. ಜನರೇ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಿರುವುದಾಗಿ ವರದಿ ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ