ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭುಟ್ಟೋ ಹಂತಕರ ಸೆರೆಗೆ ಪಾಕ್ ಪ್ರಯತ್ನ ಶ್ಲಾಘನೀಯ! (UN | Pakistan | Benazir Bhutto | Pervez Musharraf)
Bookmark and Share Feedback Print
 
ಉಗ್ರರಿಂದ ಹತ್ಯೆಗೀಡಾದ ಪಾಕಿಸ್ತಾನದ ಮಾಜಿ ಪ್ರಧಾನಿ ಬೇನಜಿರ್ ಭುಟ್ಟೋ ಹಂತಕರನ್ನು ಸೆರೆ ಹಿಡಿಯುವಲ್ಲಿ ಪಾಕ್ ಸರ್ಕಾರದ ಪ್ರಯತ್ನ ಉತ್ತಮ ರೀತಿಯಲ್ಲಿ ಇರುವುದಾಗಿ ಪಾಕಿಸ್ತಾನಿಯರು ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ಅಭಿಪ್ರಾಯ ಸಮೀಕ್ಷೆಯೊಂದು ಬಹಿರಂಗಗೊಳಿಸಿದೆ.

ಭುಟ್ಟೋ ಅವರ ಹತ್ಯೆ ಹಂತಕರನ್ನು ಸೆರೆಹಿಡಿಯುವಲ್ಲಿ ಪಾಕ್ ಸರ್ಕಾರ ಕೈಗೊಂಡಿರುವ ಕ್ರಮ ತೃಪ್ತಿದಾಯಕವೇ ಎಂಬ ನಿಟ್ಟಿನಲ್ಲಿ ಅಸಾಸ್ ಉರ್ದು ದಿನ ಪತ್ರಿಕೆ ನಡೆಸಿದ ಅಭಿಪ್ರಾಯ ಸಂಗ್ರಹದಲ್ಲಿ ಬಹುತೇಕ ಪಾಕಿಸ್ತಾನಿಯರು ಹೌದು ಎಂದೇ ತಿಳಿಸಿದ್ದಾರೆ.

ಸುಮಾರು 7,213ಮಂದಿಯ ಅಭಿಪ್ರಾಯ ಸಂಗ್ರಹಿಸಿರುವ ಪತ್ರಿಕೆ, ಇದರಲ್ಲಿ 2524ಮಂದಿ ಬೇನಜಿರ್ ಹಂತಕರನ್ನು ಬಂಧಿಸುವುದರ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಮಾಜಿ ಪ್ರಧಾನಿ ಭುಟ್ಟೋ ಹತ್ಯೆ ಕುರಿತಂತೆ ವಿಶ್ವಸಂಸ್ಥೆ ಈಗಾಗಲೇ ತನಿಖೆಯನ್ನು ನಡೆಸುತ್ತಿದೆ. ಆದರೆ ಈವರೆಗೂ ಹಂತಕರ ಕುರಿತು ಯಾವುದೇ ಸೂಕ್ತ ಮಾಹಿತಿ ಲಭಿಸಿಲ್ಲವಾಗಿತ್ತು. ಭುಟ್ಟೋ ಹತ್ಯೆಯ ಹಿಂದೆ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಜನರಲ್ ಮುಷರ್ರಫ್ ಅವರ ಕೈವಾಡ ಇರುವುದಾಗಿ ಇತ್ತೀಚೆಗಷ್ಟೇ ಬ್ರಿಟನ್‌ನಲ್ಲಿರುವ ಪಾಕ್ ರಾಯಭಾರಿಯೊಬ್ಬರು ಆರೋಪಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ