ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಶ್ರೀಲಂಕಾ ಅಧ್ಯಕ್ಷಗಿರಿ ಚುನಾವಣೆಯಲ್ಲಿ 'ತಮಿಳರ ಓಲೈಕೆ' (Rajapakse | Tamil voters | Sri Lanka | Colombo | Sarath Fonseka,)
Bookmark and Share Feedback Print
 
ಶ್ರೀಲಂಕಾ ಅಧ್ಯಕ್ಷಗಾದಿಗಾಗಿ ನಡೆಯುತ್ತಿರುವ ಚುನಾವಣೆ ಕಾವೇರುತ್ತಿದ್ದು, ಅಭ್ಯರ್ಥಿಗಳಾದ ಹಾಲಿ ಅಧ್ಯಕ್ಷ ರಾಜಪಕ್ಸೆ ಮತ್ತು ಲಂಕಾದ ಮಿಲಿಟರಿಯ ಮಾಜಿ ವರಿಷ್ಠ ಸರತ್ ಫೋನ್ಸೆಕಾ ಅವರು ತಮಿಳು ಮತದಾರರ ಓಲೈಕೆಗೆ ಮುಂದಾಗಿದ್ದಾರೆ.

ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ, ರಾಜಪಕ್ಸೆಯ ಪ್ರತಿಸ್ಪರ್ಧಿಯಾಗಿರುವ ಫೋನ್ಸೆಕಾ ಶನಿವಾರ ಜಾಫ್ನಾ ಪ್ರದೇಶಕ್ಕೆ ಭೇಟಿ ನೀಡಿ, ತಮಿಳರ ಮತ ಓಲೈಕೆಯಲ್ಲಿ ತೊಡಗಿದ್ದಾರೆ. ಜನವರಿ 26ರಂದು ಅಧ್ಯಕ್ಷೀಯ ಚುನಾವಣೆ ನಡಯಲಿದೆ. ಐತಿಹಾಸಿಕ ಹಿಂದೂ ದೇವಾಲಯಕ್ಕೆ ಭೇಟಿ ನೀಡಿರುವ ಅವರು ನಂತರ ರಾಲಿಯನ್ನು ಉದ್ದೇಶಿಸಿ ಮಾತನಾಡಿದರು.

58ರ ಹರೆಯದ ಫೋನ್ಸೆಕಾ ಅವರು ಜಾಫ್ನಾದ ಪ್ರಭಾವಶಾಲಿ ರೋಮನ್ ಕ್ಯಾಥೋಲಿಕ್ ಬಿಷಪ್ ಥೋಮಸ್ ಸೌಂದ್ರಾನಾಯಗಂ ಅವರನ್ನು ಕೂಡ ಭೇಟಿ ಮಾಡಿ ಚರ್ಚಿಸಿರುವುದಾಗಿ ವಕ್ತಾರರೊಬ್ಬರು ತಿಳಿಸಿದ್ದಾರೆ.

ಅಲ್ಲದೇ, ಅಧ್ಯಕ್ಷ ರಾಜಪಕ್ಸೆ ಕೂಡ ಜನವರಿ ತಿಂಗಳಿನಲ್ಲಿ ಜಾಫ್ನಾನಕ್ಕೆ ಭೇಟಿ ನೀಡಿ ತಮಿಳರ ಮತ ಯಾಚಿಸಲಿದ್ದಾರೆ ಎಂದು ಕಚೇರಿ ಮೂಲಗಳು ಹೇಳಿವೆ. ಲಂಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಬಹುಸಂಖ್ಯಾತ ಸಿಂಹಳೀಯರ ಮತ ಇಬ್ಭಾಗವಾಗಿದ್ದು, ಅಲ್ಪಸಂಖ್ಯಾತ ತಮಿಳರ ಮತ ನಿರ್ಣಾಯಕವಾಗಿದೆ. ಹಾಗಾಗಿ ರಾಜಪಕ್ಸೆ ಮತ್ತು ಫೋನ್ಸೆಕಾ ತಮಿಳರ ಮತದತ್ತ ಚಿತ್ತ ಹರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ