ಅಮೆರಿಕಾದ ಮಾನವ ರಹಿತ ಯುದ್ಧ ವಿಮಾನಗಳು ಪಾಕಿಸ್ತಾನದಲ್ಲಿ ನಮ್ಮ ಅಗ್ರ ನಾಯಕರನ್ನು ಕೊಂದು ಹಾಕಿರುವುದಕ್ಕೆ ಪ್ರತೀಕಾರವಾಗಿ ಸಿಐಎಯ ಏಳು ಅಧಿಕಾರಿಗಳನ್ನು ಅಫಘಾನಿಸ್ತಾನದಲ್ಲಿ ಆತ್ಮಹತ್ಯಾ ದಾಳಿಯ ಮೂಲಕ ಸಾಯಿಸಲಾಗಿದೆ ಎಂದು ಅಲ್‌ಖೈದಾ ಹೇಳಿದೆಯೆಂದು ಭಯೋತ್ಪಾದಕರ ನಿಗಾ ಸಂಸ್ಥೆಯೊಂದು ಗುರುವಾರ ತಿಳಿಸಿದೆ.
PR
ತಾನು ಮೂರು ಭಯೋತ್ಪಾದಕ ಸಂಘಟನೆಗಳ ಏಜೆಂಟ್ ಎಂದು ಹೇಳಿಕೊಂಡಿದ್ದ ಜೋರ್ಡನ್‌ನ ಹುಮಾಮ್ ಖಾಲಿಲ್ ಅಬು ಮುಲಾಲ್ ಅಲ್ ಬಾಲವಿ ಎಂಬಾತ ಡಿಸೆಂಬರ್ 30ರಂದು ಅಫಘಾನಿಸ್ತಾನದ ಖೋಸ್ಟ್ ಎಂಬಲ್ಲಿನ ಅಮೆರಿಕಾ ನೆಲೆಯಲ್ಲಿ ತನ್ನನ್ನು ತಾನು ಸ್ಫೋಟಿಸಿಕೊಂಡು ಏಳು ಮಂದಿ ಅಮೆರಿಕನ್ನರ ಸಾವಿಗೆ ಕಾರಣನಾಗಿದ್ದ. ಸಿಐಎ ವಿರುದ್ಧ 1983ರ ನಂತರ ನಡೆದ ಬಹುದೊಡ್ಡ ದಾಳಿ ಇದೆಂದು ಹೇಳಲಾಗಿದೆ.
ಇದು ನಮ್ಮ ನಾಯಕರ ಮೇಲಿನ ದಾಳಿಗೆ ಪ್ರತೀಕಾರವಾಗಿದೆ ಎಂದು ಅಮೆರಿಕಾ ಡ್ರೋನ್ ದಾಳಿಯಲ್ಲಿ ಸಾವನ್ನಪ್ಪಿದ ಭಯೋತ್ಪಾದಕ ನಾಯಕರ ಹೆಸರುಗಳನ್ನು ಬಾಂಬರ್ ಸಾಯುವ ಮೊದಲು ವಿಲ್ ಬರೆದಿದ್ದ ಎಂದು ಅಫಘಾನಿಸ್ತಾನದ ಅಲ್‌ಖೈದಾ ಮುಖ್ಯಸ್ಥ ಮುಸ್ತಾಫಾ ಅಬು ಅಲ್ ಯಾಜಿದ್ ಹೇಳಿದ್ದಾನೆಂದು ಭಯೋತ್ಪಾದಕರ ನಿಗಾ ಸಂಸ್ಥೆ 'ಸೈಟ್' ವರದಿ ಮಾಡಿದೆ.
2007ರ ಡಿಸೆಂಬರ್‌ನಲ್ಲಿ ಪಾಕಿಸ್ತಾನ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರ ಮೇಲಿನ ದಾಳಿ ಸೇರಿದಂತೆ ಹಲವು ಬರ್ಬರ ದಾಳಿಗಳಿಗೆ ಕಾರಣನಾಗಿದ್ದ ಪಾಕಿಸ್ತಾನದ ತಾಲಿಬಾನ್ ಮುಖಂಡ ಬೈತುಲ್ಲಾ ಮೆಹ್ಸೂದ್‌ನನ್ನು ಕೊಂದು ಹಾಕಿದ ಪ್ರಕರಣವನ್ನೂ ಇದರಲ್ಲಿ ಉಲ್ಲೇಖಿಸಲಾಗಿದೆ.
ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಮೆಹ್ಸೂದ್ ತನ್ನ ಮಾವನ ಮನೆಯಲ್ಲಿದ್ದಾಗ ಅಮೆರಿಕಾ ಕ್ಷಿಪಣಿ ದಾಳಿಯಿಂದಾಗಿ ಕೊಲ್ಲಲ್ಪಟ್ಟಿದ್ದ.