ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ರಾಣಾ ಜಾಮೀನು ಅರ್ಜಿ ವಿಚಾರಣೆಗೆ ಅಮೆರಿಕ ನಕಾರ (Rana | America | Mumbai Terror attack | Chikago)
Bookmark and Share Feedback Print
 
ಮುಂಬೈ ದಾಳಿಯ ಶಂಕಿತ ಉಗ್ರ ರಾಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಅಮೆರಿಕದ ನ್ಯಾಯಾಧೀಶರು ತಿರಸ್ಕರಿಸಿದ್ದಾರೆ.

ರಾಣಾ ಮೇಲಿರುವ ಆರೋಪ ಪಟ್ಟಿಯ ವಿಚಾರಣೆಯನ್ನು ಬೇರೊಬ್ಬ ನ್ಯಾಯಾಧೀಶರು ಕೈಗೆತ್ತಿಕೊಳ್ಳುವ ಕಾರಣ ಜಾಮೀನು ಅರ್ಜಿಯ ವಿಚಾರಣೆ ಮುಂದೂಡಲಾಗಿದ್ದು, ಈ ಹಿನ್ನೆಲೆಯಲ್ಲಿ ರಾಣಾ ಮತ್ತಷ್ಟು ದಿನಗಳ ಕಾಲ ಜೈಲಿನಲ್ಲಿಯೇ ಕಳೆಯಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಬಂಧನದಿಂದ ಹೊರಬರಲು ಪ್ರಯತ್ನಿಸುತ್ತಿರುವ ರಾಣಾ ತನ್ನ ಮೇಲಿರುವ ಆರೋಪದ ವಿಚಾರಣೆಗಾಗಿ ಇಲ್ಲಿನ ಜಿಲ್ಲಾ ನ್ಯಾಯಾಧೀಶ ಮಾಥೇನ್ ಕನ್ಲಿ ಅವರಿದ್ದ ಪೀಠದ ಮುಂದೆ ಹಾಜರಾಗಿದ್ದ. ಆದರೆ ರಾಣಾ ವಿರುದ್ಧ 26/11ರ ಮುಂಬೈ ದಾಳಿಯ ಆರೋಪವಿರುವುದರಿಂದ ವಿಚಾರಣೆಯನ್ನು ಜ.14ಕ್ಕೆ ಮುಂದೂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ