ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ರಾಜತಾಂತ್ರಿಕರಿಗೆ ಪಾಕ್ ಕಿರುಕುಳ ನೀಡುತ್ತಿದೆ: ಅಮೆರಿಕಾ (US embassy | Pakistan | harassing diplomats | Al-Qaida)
Bookmark and Share Feedback Print
 
ಅಮೆರಿಕಾ ಮತ್ತು ಪಾಕಿಸ್ತಾನಗಳ ನಡುವಿನ ಮೈತ್ರಿಯಲ್ಲಿ ಒಡಕುಂಟಾಗುತ್ತಿದೆ ಎಂಬುದನ್ನು ಎತ್ತಿ ತೋರಿಸಿರುವ ಅಮೆರಿಕಾ ದೂತವಾಸವು, ತನ್ನ ರಾಜತಾಂತ್ರಿಕರನ್ನು ಪಾಕಿಸ್ತಾನದಲ್ಲಿ ತಡೆಯಲಾಗುತ್ತಿದೆ ಮತ್ತು ತೀವ್ರ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದೆ.

ಇಸ್ಲಾಮಾಬಾದ್‌ನಲ್ಲಿನ ಅಮೆರಿಕಾ ದೂತವಾಸ ಕಚೇರಿಯನ್ನು ವಿಸ್ತರಿಸುವುದು ಮತ್ತು ನೂರಾರು ಸಿಬ್ಬಂದಿಗಳನ್ನು ಹೆಚ್ಚಿಸುವ ವಾಷಿಂಗ್ಟನ್ ನಡೆಯನ್ನು ಪಾಕಿಸ್ತಾನ ತೀವ್ರವಾಗಿ ವಿರೋಧಿಸುತ್ತಿದೆ. ಇದನ್ನು ಅಮೆರಿಕಾ ಅಧಿಕಾರಿಗಳ ಮೇಲೆ ಪಾಕಿಸ್ತಾನವು ಬಹಿರಂಗವಾಗಿ ತೋರಿಸುತ್ತಿದೆ ಎಂದು ಹೇಳಲಾಗಿದೆ.

ಪಾಕಿಸ್ತಾನ-ಅಫಘಾನಿಸ್ತಾನ ಗಡಿಭಾಗದಲ್ಲಿನ ಅಲ್‌ಖೈದಾ ಕೂಟದ ಭಯೋತ್ಪಾದಕರ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಪಾಕಿಸ್ತಾನಕ್ಕೆ ಮಾನವೀಯ ನೆರವನ್ನು ಅಮೆರಿಕಾ ನೀಡುತ್ತಿದೆ. 7.5 ಬಿಲಿಯನ್ ಡಾಲರುಗಳಷ್ಟು ಮೊತ್ತದ ಈ ನಿಧಿಯನ್ನು ಹಂಚಲು ಹೆಚ್ಚಿನ ಕೊಠಡಿಗಳು ಮತ್ತು ಜನರ ಅಗತ್ಯವಿದೆ ಎಂದು ಅಮೆರಿಕಾ ಅಧಿಕಾರಿಗಳು ಹೇಳಿದ್ದಾರೆ.

ಇತ್ತೀಚಿನ ಕೆಲ ವಾರಗಳಲ್ಲಿ ವೀಸಾ ಪಡೆಯಲು ಮತ್ತು ವಿಸ್ತರಿಸಲು ಅಮೆರಿಕಾ ರಾಜತಾಂತ್ರಿಕರು ಸಾಕಷ್ಟು ಸಮಯ ಕಾಯಬೇಕಾಗಿತ್ತು. ಅಲ್ಲದೆ ಕೆಲವು ಕಡೆ ಪರಿಶೀಲನಾ ಕೇಂದ್ರಗಳಲ್ಲಿ ಪೊಲೀಸರು ಅಮೆರಿಕಾ ಅಧಿಕಾರಿಗಳನ್ನು ತಡೆದು, ಅವರ ಕಾರುಗಳ ಸಮೇತ ತಾತ್ಕಾಲಿಕವಾಗಿ ವಶಕ್ಕೆ ತೆಗೆದುಕೊಂಡ ಘಟನೆಗಳೂ ನಡೆದಿವೆ.

ಅಭಿವೃದ್ಧಿ ಯೋಜನೆ ಸಂಬಂಧ ಬಲೂಚಿಸ್ತಾನಕ್ಕೆ ಹೊರಟಿದ್ದ ಅಮೆರಿಕಾ ದೂತವಾಸ ಕಚೇರಿಯ ಇಬ್ಬರು ಪಾಕಿಸ್ತಾನಿ ಸಿಬ್ಬಂದಿಗಳು ಮತ್ತು ಅದರ ಪೊಲೀಸರನ್ನು ಬುಧವಾರ ತಡೆಯಲಾಗಿದೆ ಎಂದೂ ರಾಯಭಾರ ಕಚೇರಿ ಹೇಳಿದೆ.

ಅಮೆರಿಕಾ ದೂತವಾಸ ಅಧಿಕಾರಿಗಳು ಅಥವಾ ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳುವಾಗ ಪರಿಶೀಲನೆ ಅಗತ್ಯ. ಅದಕ್ಕಾಗಿ ನಮಗೆ ವಿಶೇಷ ಗುರುತನ್ನು ನೀಡಬೇಕು ಎಂದು ಅಮೆರಿಕಾ ಇದೀಗ ಪಾಕಿಸ್ತಾನವನ್ನು ಆಗ್ರಹಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ