ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬುರ್ಖಾ ಧರಿಸುವವರಿಗೆ ಭಾರೀ ದಂಡ ಹೇರಲಿದೆ ಫ್ರಾನ್ಸ್..! (France | Muslim women | wearing burqa | Fine)
Bookmark and Share Feedback Print
 
ಬುರ್ಖಾ ನಿಷೇಧದ ಬಗ್ಗೆ ಕಳೆದ ಕೆಲವು ವರ್ಷಗಳಿಂದ ವಿವಾದದಲ್ಲಿರುವ ಫ್ರಾನ್ಸ್ ಪ್ರಬಲ ವಿರೋಧದ ನಡುವೆಯೇ ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ಇಸ್ಲಾಮಿಕ್ ಬುರ್ಖಾ ಧರಿಸುವ ಮುಸ್ಲಿಂ ಮಹಿಳೆಯರ ಮೇಲೆ ಭಾರೀ ದಂಡ ಹೇರಲು ನಿರ್ಧರಿಸಿದೆ.

ಈ ಸಂಬಂಧ ಕರಡು ಮಸೂದೆಯೊಂದು ಸಿದ್ಧವಾಗುತ್ತಿದ್ದು, ಒಂದೆರಡು ವಾರಗಳಲ್ಲಿ ಇಲ್ಲಿನ ಸಂಸತ್ತಿನಲ್ಲಿ ಮಂಡಿಸಲಾಗುತ್ತದೆ. ಅದರ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸುವ ಮಹಿಳೆಯ ಮೇಲೆ ಕನಿಷ್ಠ 1,000 ಅಮೆರಿಕನ್ ಡಾಲರ್ (ಸುಮಾರು 47 ಸಾವಿರ ರೂಪಾಯಿ) ದಂಡ ವಿಧಿಸಬಹುದಾಗಿದೆ.
Burkha
PR


ಅದೇ ರೀತಿ ಪುರುಷರು ತಮ್ಮ ಪತ್ನಿಯರು ಬುರ್ಖಾ ಅಥವಾ ನಿಕಾಬ್ ಧರಿಸಲೇಬೇಕೆಂದು ಬಲವಂತ ಮಾಡಿದಲ್ಲಿ, ಅವರೂ ಭಾರೀ ಪ್ರಮಾಣದ ದಂಡ ತೆರಲು ಸಿದ್ಧರಾಗಬೇಕಾಗುತ್ತದೆ ಎಂದು ರಾಷ್ಟ್ರೀಯ ಸಂಸತ್ತಿನಲ್ಲಿ ಆಡಳಿತ ಪಕ್ಷ ಯುಎಂಪಿ ಮುಖ್ಯಸ್ಥರಾಗಿರುವ ಜೀನ್ ಫ್ರಾನ್ಕೋಯಿಸ್ ಕೋಪ್ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ದೇಶದ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುವ ದೃಷ್ಟಿಯಿಂದ ಈ ಕಾನೂನನ್ನು ಜಾರಿಗೆ ತರಲಾಗುತ್ತಿದೆ. ಇದರ ಪ್ರಕಾರ ಬೀದಿಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮುಖ ಮುಚ್ಚಿಕೊಂಡು ಓಡಾಡುವಂತಿಲ್ಲ. ಆದರೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ಅಥವಾ ಹಬ್ಬಗಳನ್ನು ಇದರಿಂದ ಹೊರಗಿಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಮುಂದಿನ ಎರಡು ವಾರಗಳೊಳಗೆ ಇದರ ಕರಡು ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗುತ್ತದೆ. ಬಳಿಕ ಅದರ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಸಲಾಗುತ್ತದೆ ಎಂದು ಅವರು ವಿವರಣೆ ನೀಡಿದರು.

ಈ ಬಗ್ಗೆ ಹಿಂದೆ ಹೇಳಿಕೆ ನೀಡಿದ್ದ ಫ್ರಾನ್ಸ್ ಅಧ್ಯಕ್ಷ ನಿಕೋಲಾಸ್ ಸರ್ಕೋಜಿ, ಬುರ್ಖಾಕ್ಕೆ ಫ್ರಾನ್ಸ್‌ನಲ್ಲಿ ಸ್ವಾಗತವಿಲ್ಲ ಎಂದಿದ್ದರು.

ನಾವು ಬುರ್ಖಾ ಸಂಸ್ಕೃತಿಯನ್ನು ಸಂಪೂರ್ಣವಾಗಿ ವಿರೋಧಿಸುತ್ತೇವೆ. ಇದು ಸ್ತ್ರೀಯರ ಸ್ವಾತಂತ್ರ್ಯವನ್ನು ಹರಣ ಮಾಡುತ್ತಿದ್ದು, ಜೈಲಿನಲ್ಲಿ ಹಾಕಿದ ಅನುಭವ ನೀಡುತ್ತದೆ ಎಂದಿದ್ದರು.

ಆದರೆ ವಿರೋಧ ಪಕ್ಷಗಳು ಸರಕಾರದ ನಿಲುವಿಗೆ ತೀವ್ರ ವಿರೋಧ ವ್ಯಕ್ತಪಡಿಸಿವೆ. ಬುರ್ಖಾವನ್ನು ನಿಷೇಧ ಮಾಡುವುದರಿಂದ ಸುರಕ್ಷತೆಯನ್ನು ಹೆಚ್ಚಿಸಬಹುದು ಎನ್ನುವುದು ಸಮರ್ಥನೀಯವಲ್ಲ, ಧಾರ್ಮಿಕ ವಿಚಾರಗಳನ್ನು ಗೌರವಿಸಬೇಕು ಎಂದು ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ