ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಮೆರಿಕಾಕ್ಕೆ ಬಾಂಬರ್ ಚಿತ್ರ ನೀಡಲು ಸಿದ್ಧ: ನೈಜೀರಿಯಾ (Nigeria | December 25 bomber | Lagos airport | America)
Bookmark and Share Feedback Print
 
ಅಮೆರಿಕಾದ ವಿಮಾನವನ್ನು ಸ್ಫೋಟಿಸಲು ಯತ್ನಿಸಿದ ಶಂಕಿತ ಬಾಂಬರ್ ಛಾಯಾಚಿತ್ರಗಳನ್ನು ಸಂಯುಕ್ತ ಸಂಸ್ಥಾನದ ತನಿಖಾದಳಕ್ಕೆ ನೀಡಲು ಸಿದ್ಧ ಎಂದು ನೈಜೀರಿಯಾ ಗುರುವಾರ ತಿಳಿಸಿದೆ.

ಡಿಸೆಂಬರ್ 24ರಂದು ಲಾಗೋಸ್ ವಿಮಾನ ನಿಲ್ದಾಣದಲ್ಲಿ ಸುರಕ್ಷತಾ ಪರಿಶೀಲನೆಗಳನ್ನು ನಡೆಸುವಾಗ ತೆಗೆದಿದ್ದ ಛಾಯಾಚಿತ್ರಗಳು ನಮ್ಮಲ್ಲಿವೆ. ನಮ್ಮ ಭದ್ರತಾ ಸಿಬ್ಬಂದಿ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ ಎಂಬುದು ಇದರಿಂದ ರುಜುವಾತಾಗಲಿದೆ ಎಂದು ನ್ಯಾಯಾಂಗ ಸಚಿವ ಮೈಕೆಲ್ ಆಂಡೋಕಾ ತಿಳಿಸಿದ್ದಾರೆ.
Nigeria flag
PR


ಶಂಕಿತನನ್ನು ಪರಿಶೀಲನೆ ನಡೆಸಿದ ಸಾಕ್ಷ್ಯಗಳಿವೆ. ಸುರಕ್ಷತೆಯನ್ನು ಯಾವ ರೀತಿಯಲ್ಲಿ ಕಾಪಾಡಬೇಕಿತ್ತೋ, ಅದನ್ನು ನಮ್ಮ ಭದ್ರತಾ ಸಿಬ್ಬಂದಿ ತಪ್ಪಿಲ್ಲದೆ ನಡೆಸಿದ್ದಾರೆ ಎಂದು ಪತ್ರಕರ್ತರಿಗೆ ಸಚಿವರು ವಿವರಣೆ ನೀಡಿದರು.

ಅಲ್ಲದೆ ತಮ್ಮನ್ನು ಅಮೆರಿಕಾ ಭಯೋತ್ಪಾದಕರ ಪರಿವೀಕ್ಷಣಾ ಪಟ್ಟಿಯಿಂದ ಕೈ ಬಿಡಬೇಕೆಂದು ಕೂಡ ನೈಜೀರಿಯಾ ಸರಕಾರ ಬೇಡಿಕೆ ಸಲ್ಲಿಸಿದೆ.

ಅಧ್ಯಕ್ಷ ಬರಾಕ್ ಒಬಾಮಾ ಅವರು ಭದ್ರತಾ ವಿಮರ್ಶೆ ನಡೆಸಿದ ನಂತರ ಇರಾನ್, ಇರಾಕ್, ಸಿರಿಯಾ ಮತ್ತು ಅಫಘಾನಿಸ್ತಾನ ಸೇರಿದಂತೆ 14 ದೇಶಗಳನ್ನು ಭಯೋತ್ಪಾದಕರ ಪರಿಶೀಲನಾ ಪಟ್ಟಿಯಲ್ಲಿಟ್ಟಿತ್ತು.

ನೈಜೀರಿಯಾವು ಸಂಬಂಧದಲ್ಲಿ ಒಡಕು ಹುಟ್ಟಿಸುವ ಯಾವುದೇ ಕಾರ್ಯಕ್ಕೆ ಅವಕಾಶ ನೀಡುವುದಿಲ್ಲ ಎಂದಿರುವ ಸಚಿವರು, ವಾಸ್ತವಾಂಶಗಳ ಕುರಿತು ನನಗೆ ಹೆಚ್ಚಿನ ಭರವಸೆಗಳಿವೆ. ಅಮೆರಿಕಾ ಸರಕಾರವು ನೈಜೀರಿಯಾ ಕುರಿತು ತೆಗೆದುಕೊಂಡಿರುವ ನಿರ್ಧಾರವನ್ನು ಬದಲಾಯಿಸಬೇಕು ಎಂದರು.

ನೈಜೀರಿಯಾವು ಭಯೋತ್ಪಾದನಾ ರಾಷ್ಟ್ರವಲ್ಲ. ಅಂತಹ ಕುಕೃತ್ಯಗಳಲ್ಲಿ ಭಾಗವಹಿಸಿರುವ, ಭಾಗವಹಿಸುವ ದೇಶಗಳ ಪಟ್ಟಿಯಲ್ಲಿ ನೈಜೀರಿಯಾ ಕಾಣಿಸಿಕೊಳ್ಳಲು ಇಚ್ಛಿಸುವುದಿಲ್ಲ. ನಾವು ಶಾಂತಿಯನ್ನು ಕಾಪಾಡಿಕೊಂಡಿರುವ ಹಿನ್ನೆಲೆಯನ್ನು ಹೊಂದಿರುವವರು ಎಂದು ವಿವರಣೆ ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ