ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತ-ಪಾಕ್ ವಿವಾದ-ಸಂಧಾನ ನನ್ನ ಕೆಲಸವಲ್ಲ: ಅಮೆರಿಕ (Pakistan | India | Holbrooke | Afghanistan | Meera Shankar)
Bookmark and Share Feedback Print
 
ಅಫ್ಘಾನ್-ಪಾಕ್ ಗಡಿಭಾಗದಲ್ಲಿ ಏನು ನಡೆಯುತ್ತಿದೆ ಎಂಬ ಬಗ್ಗೆ ಎಲ್ಲರಿಗೂ ತಿಳಿದಿದೆ. ಅಲ್ಲದೇ ಭಾರತದ ನಿಲುವು ಕೂಡ ಸರಿಯಾಗಿಯೇ ಇದೆ ಎಂದಿರುವ ಪಾಕ್ ಮತ್ತು ಅಫ್ಘಾನ್‌ನ ಅಮೆರಿಕದ ವಿಶೇಷ ಪ್ರತಿನಿಧಿಯಾಗಿರುವ ರಿಚರ್ಡ್ ಹಾಲ್‌ಬ್ರೂಕ್, ಭಾರತ ಮತ್ತು ಪಾಕ್ ವಿವಾದದ ಕುರಿತು ಸಂಧಾನ ನಡೆಸುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ವಿವಾದ ಕುರಿತಂತೆ ಅಮೆರಿಕ ಸಂಧಾನ ಮಾತುಕತೆ ನಡೆಸಲಿದೆ ಎಂಬ ಪಾಕ್ ಮಾಧ್ಯಮಗಳ ವರದಿ ಕುರಿತಂತೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

ಅವೆರಡೂ ದೇಶಗಳ ನಡುವಿನ ಸಮಸ್ಯೆಗಳ ಇತ್ಯರ್ಥ ನನ್ನ ಕೆಲಸವಲ್ಲ, ಆದರೆ ಅಲ್ಲಿ ನಡೆಯುತ್ತಿರುವ ಬೆಳವಣಿಗೆ ಕುರಿತು ಗಮನಹರಿಸಲಾಗುವುದು ಎಂದು ತಿಳಿಸಿದ್ದಾರೆ. ನಾನು ಅಫ್ಘಾನ್ ಹಾಗೂ ಪಾಕಿಸ್ತಾನದ ವಿಶೇಷ ಪ್ರತಿನಿಧಿಯೇ ವಿನಃ ನಾನು ಭಾರತದ ಪ್ರತಿನಿಧಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅಲ್ಲದೇ, ಭಾರತ ಗ್ರೇಟ್ ದೇಶ ಎಂದು ಬಣ್ಣಿಸಿರುವ ಹಾಲ್‌ಬ್ರೂಕ್, ನಮ್ಮ ಉತ್ತಮವಾದ ರಾಯಭಾರಿ ಕೂಡ ಭಾರತದಲ್ಲಿ ಇದ್ದಾರೆ. ದ್ವಿಪಕ್ಷೀಯ ಸಂಬಂಧ ಕುರಿತಂತೆ ಅಮೆರಿಕ ದೊಡ್ಡ ವ್ಯಾಪ್ತಿಯನ್ನೇ ಹೊಂದಿದೆ. ಹಾಗಾಗಿ ನಾನು ಭಾರತದ ನಡುವಿನ ವಿವಾದ ಕುರಿತಂತೆ ತಲೆಹಾಕಲಾರೆ ಎಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ