ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮೈಕೆಲ್ ಜಾಕ್ಸನ್ ಸಾವು; ವೈದ್ಯರ ಮೇಲೆ ಕ್ರಿಮಿನಲ್ ಕೇಸ್?
(Michael Jackson | death investigation | King of Pop | Dr Conrad Murray)
ಮೈಕೆಲ್ ಜಾಕ್ಸನ್ ಸಾವಿನ ತನಿಖೆ ಪೂರ್ಣಗೊಂಡಿದ್ದು, ಪಾಪ್ ದೊರೆಗೆ ಚಿಕಿತ್ಸೆ ನೀಡಿದ್ದ ವೈದ್ಯರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.
ಲಾಸ್ ಎಂಜಲೀಸ್ ಪೊಲೀಸ್ ಇಲಾಖೆಯು ಕಳೆದ ತಿಂಗಳೇ ತನ್ನ ತನಿಖೆಯನ್ನು ಪೂರ್ಣಗೊಳಿಸಿದ್ದು, ಇನ್ನು ಕೆಲವೇ ವಾರಗಳಲ್ಲಿ ಜಿಲ್ಲಾ ನ್ಯಾಯಾಧೀಶರಿಗೆ ವರದಿಯನ್ನು ಸಲ್ಲಿಸಲಿದೆ ಎಂದು ಸೆಲೆಬ್ರಿಟಿ ವೆಬ್‌ಸೈಟ್ 'ಟಿಎಂಜೆಡ್.ಕಾಮ್' ಹೇಳಿದೆ.
PR
ಕಾನೂನು ಜಾರಿ ಇಲಾಖಾ ಮೂಲಗಳ ಪ್ರಕಾರ ಲಾಸ್ ಎಂಜಲೀಸ್ ಪೊಲೀಸ್ ಇಲಾಖೆಯ ತನಿಖೆಯು 'ಪರಿಪೂರ್ಣ' ಮತ್ತು 'ಕಠಿಣ'ವಾಗಿದ್ದು, ಜಾಕ್ಸನ್‌ಗೆ ಚಿಕಿತ್ಸೆ ನೀಡಿದ್ದ ವೈದ್ಯ ಕನ್ರಾಡ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಅಗತ್ಯವಿರುವ ಸಾಕ್ಷ್ಯಗಳನ್ನು ಒಳಗೊಂಡಿದೆ.
ಮತ್ತೊಂದು ಮೂಲದ ಪ್ರಕಾರ ಜಿಲ್ಲಾ ವಕೀಲರು ಲಾಸ್ ಎಂಜಲೀಸ್ ಪೊಲೀಸ್ ತನಿಖಾ ದಳದೊಂದಿಗೆ ಸೇರಿಕೊಂಡು ಈ ಬಗ್ಗೆ ಈಗಾಗಲೇ ಪ್ರಕ್ರಿಯೆ ಆರಂಭಿಸಿದ್ದಾರೆ. ಕೆಲವು ನಿರ್ದಿಷ್ಟ ಪ್ರಕರಣಗಳನ್ನು ದಾಖಲಿಸಲಾಗುತ್ತದೆ ಎಂದು ಹೇಳಲಾಗಿದೆ.
ಪ್ರಕರಣ ದಾಖಲಿಸುವ ಕುರಿತು ಇದುವರೆಗೆ ಯಾವುದೇ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳದಿದ್ದರೂ, ಮೂಲಗಳ ಪ್ರಕಾರ ವೈದ್ಯರ ದಿವ್ಯ ನಿರ್ಲಕ್ಷ್ಯಕ್ಕಾಗಿ ಉದ್ದೇಶರಹಿತವಾದ ಕೊಲೆ ದಾವೆಯನ್ನು ಹೂಡಲಾಗುತ್ತದೆ.
ಕಳೆದ ವರ್ಷದ ಜೂನ್ 25ರಂದು ಹಠಾತ್ತನೆ ಪಾಪ್ ದೊರೆ ಜಾಕ್ಸನ್ ಸಾವನ್ನಪ್ಪಿದ್ದರು. ಲಂಡನ್ ಸಂಗೀತ ಕಾರ್ಯಕ್ರಮದ ಮೂಲಕ ಪಾಪ್ ಲೋಕಕ್ಕೆ ಅದ್ಧೂರಿಯಾಗಿ ಮರಳುವ ಉದ್ದೇಶವನ್ನಿಟ್ಟುಕೊಂಡಿದ್ದ ಅವರಿಗೆ ವೈದ್ಯರು ವಿವೇಕರಹಿತರಾಗಿ ಮಿತಿ ಮೀರಿದ ಔಷಧಿ ನೀಡಿದ್ದೇ ಸಾವಿಗೆ ಕಾರಣವಾಗಿತ್ತು ಎಂದು ಆರೋಪಿಸಲಾಗಿದೆ.