ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬಂಧಮುಕ್ತ ಕೈದಿಗಳೆಲ್ಲಾ ತಾಲಿಬಾನ್ ಸೇರಿದ್ದಾರೆ: ಮಾರ್ಕ್ (US | Taliban | Barack Obama | Guantanamo Bay | jihad)
Bookmark and Share Feedback Print
 
ಗ್ವಾಂಟೇನಾಮೋ ಬೇ ಜೈಲಿನಿಂದ ಬಿಡುಗಡೆಗೊಂಡ ಉಗ್ರರು ಮತ್ತೆ ತಾಲಿಬಾನ್ ಪಡೆಯೊಂದಿಗೆ ಸೇರ್ಪಡೆಗೊಂಡು, ಅಮೆರಿಕದ ವಿರುದ್ಧ ಜಿಹಾದ್ ಸಾರಿರುವುದಾಗಿ ರಿಪಬ್ಲಿಕನ್ ಪ್ರತಿನಿಧಿಯೊಬ್ಬರು ಗಂಭೀರವಾಗಿ ಆರೋಪಿಸಿದ್ದಾರೆ.

ನಗರದ ಯೂನಿಯನ್ ಲೀಗ್ ಕ್ಲಬ್‌ನಲ್ಲಿ ಮಾತನಾಡಿದ ಇಲಿನಾಯ್ಸ್‌ನ ರಿಪಬ್ಲಿಕನ್ ಪಕ್ಷದ ಪ್ರತಿನಿಧಿ ಮಾರ್ಕ್ ಕಿರ್ಕ್ ಅವರು, ಗ್ವಾಂಟೇನಾಮೋದಲ್ಲಿರುವ ಡೆಡ್ಲಿ ಉಗ್ರರನ್ನು ಬಂಧಮುಕ್ತಗೊಳಿಸುವುದನ್ನು ಅಧ್ಯಕ್ಷ ಬರಾಕ್ ಒಬಾಮಾ ಆಡಳಿತ ಶೀಘ್ರವೇ ನಿಲ್ಲಿಸಬೇಕೆಂದು ಈ ಸಂದರ್ಭದಲ್ಲಿ ಆಗ್ರಹಿಸಿದರು.

ಇಲ್ಲದಿದ್ದರೆ ಗ್ವಾಂಟೇನಾಮೋದಿಂದ ಬಿಡುಗಡೆಗೊಂಡ ಉಗ್ರರೇ ಇಂದು ನಮ್ಮ ವಿರುದ್ಧವೇ ದೊಡ್ಡ ಪ್ರಮಾಣದಲ್ಲಿ ತಿರುಗಿ ಬಿದ್ದಿದ್ದಾರೆ. ಬಂಧಮುಕ್ತಗೊಂಡ ಕೈದಿಗಳೆಲ್ಲಾ ತಾಲಿಬಾನ್ ಸಂಘಟನೆ ಸೇರ್ಪಡೆಗೊಂಡು ಅಮೆರಿಕದ ವಿರುದ್ಧ ಜಿಹಾದ್‌ನಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

2007ರಲ್ಲಿ ಗ್ವಾಂಟೇನಾಮೋ ಬೇನಿಂದ ಮುಲ್ಲಾ ಜಾಕೀರ್ ಎಂಬ ಉಗ್ರನನ್ನು ಬಿಡುಗಡೆಗೊಳಿಸಲಾಗಿತ್ತು. ನನ್ನ ತಿಳಿವಳಿಕೆ ಪ್ರಕಾರ ಆತನ ಬಿಡುಗಡೆ ಕೂಡ ಮಹಾಪರಾಧವೇ ಆಗಿದೆ. ಈ ರೀತಿ ಬಿಡುಗಡೆಗೊಂಡವರೇ ನೇರವಾಗಿ ನಮ್ಮ ವಿರುದ್ಧವೇ ಕದನಕ್ಕೆ ಇಳಿದಿದ್ದಾರೆ ಎಂದು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ