ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬಾಲಕಿಗೆ ಲೈಂಗಿಕ ಕಿರುಕುಳ; ಭಾರತೀಯ ಚಾಲಕ ಜೈಲಿಗೆ (India | Australia | molesting schoolgirl | Baljit Singh)
Bookmark and Share Feedback Print
 
ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದ ಶಾಲಾ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಭಾರತೀಯ ಚಾಲಕನೊಬ್ಬನಿಗೆ ಆಸ್ಟ್ರೇಲಿಯಾದ ನ್ಯಾಯಾಲಯ 15 ತಿಂಗಳುಗಳ ಜೈಲು ಶಿಕ್ಷೆ ವಿಧಿಸಿದೆ.

ನಾಲ್ಕು ಮಕ್ಕಳ ತಂದೆ 46ರ ಹರೆಯದ ಎಯಿಟ್ ಮೈಲ್ ಪ್ಲೈನ್ಸ್ ನಿವಾಸಿ ಬಲ್ಜಿತ್ ಸಿಂಗ್ ಎಂಬಾತ 2008ರ ಜೂನ್ 12ರಂದು ಎಸಗಿದ ಅಪರಾಧಕ್ಕಾಗಿ ಬ್ರಿಸ್ಬೇನ್ ಜಿಲ್ಲಾ ನ್ಯಾಯಾಲಯವು ಈ ಶಿಕ್ಷೆಯನ್ನು ಪ್ರಕಟಿಸಿದೆ.

13ರ ಹರೆಯದ ಶಾಲಾ ಸಮವಸ್ತ್ರವನ್ನು ಧರಿಸಿದ್ದ ಬಾಲಕಿ ಮೊದಲು ಪಾರ್ಟಿಗೆ ಹೋಗುವಂತೆ ಟ್ಯಾಕ್ಸಿ ಚಾಲಕ ಸಿಂಗ್‌ಗೆ ಸೂಚಿಸಿದ್ದಳು. ನಂತರ ಮನಸ್ಸು ಬದಲಾಯಿಸಿದ್ದ ಆಕೆ ತನ್ನ ಅಜ್ಜಿಯ ಮನೆಯತ್ತ ಕಾರು ಚಲಾಯಿಸುವಂತೆ ಹೇಳಿದ್ದಳು.

ಅದರ ಬದಲು ಸಿಂಗ್ ದಕ್ಷಿಣ ಬ್ರಿಸ್ಬೇನ್‌ನ ಗ್ರೀನ್‌ಸ್ಲೋಪ್ಸ್ ಪಾರ್ಕ್‌ನಲ್ಲಿ ವಾಹನವನ್ನು ನಿಲ್ಲಿಸಿ, ಆಕೆಯೆದುರು ಅಸಭ್ಯ ವರ್ತನೆಯನ್ನು ತೋರಿಸಿದ್ದಲ್ಲದೆ ಮುದ್ದಿಸಿದ್ದ ಎಂದು ಅಭಿಯೋಜಕಿ ಡೆನಿತಾ ಬಾಲಿಕ್ ನ್ಯಾಯಾಲಯಕ್ಕೆ ತಿಳಿಸಿದರು.

ತನ್ನ ಕಾಮತೀಟೆಯನ್ನು ತೃಪ್ತಿಗೊಳಿಸಲು ಸಿಂಗ್ ಬಾಲಕಿಯನ್ನು ಬಳಸಿಕೊಂಡಿದ್ದಾನೆ ಎಂದು ಬಾಲಿಕ್ ಹೇಳಿದ್ದಾರೆ.

ಆದರೆ ಇದಕ್ಕೆ ತದ್ವಿರುದ್ಧ ಹೇಳಿಕೆಯನ್ನು ನೀಡಿರುವ ಸಿಂಗ್ ವಕೀಲ ಮೈಕೆಲ್ ಬ್ಯಾರ್ನೆ, ಭಾರತದಿಂದ 1990ರಲ್ಲಿ ಆಸ್ಟ್ರೇಲಿಯಾಕ್ಕೆ ಬಂದಿದ್ದ ನನ್ನ ಕಕ್ಷಿದಾರ ಓರ್ವ ಶ್ರಮಜೀವಿ; ಈ ಹಿಂದೆ ಯಾವುದೇ ತಪ್ಪನ್ನು ಮಾಡದ ಆತ ಇದೀಗ ತನ್ನ ಟ್ಯಾಕ್ಸಿ ಪರವಾನಗಿಯನ್ನೂ ಕಳೆದುಕೊಂಡಿದ್ದಾನೆ ಎಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ