ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸ್ಫೋಟಕ್ಕಾಗಿ ಮತ್ತಷ್ಟು ಮುಸ್ಲಿಂ ಯುವಕರಿಗೆ ತರಬೇತಿ: ಫಾರೂಕ್ (FBI | Umar Farouk | Nigeria | Washington | Muslim men)
Bookmark and Share Feedback Print
 
ಯೆಮೆನ್‌ನಲ್ಲಿ ಸುಮಾರು 20ಮಂದಿ ಮುಸ್ಲಿಂ ಯುವಕರಿಗೆ 'ಒಳಉಡುಪಿನಲ್ಲಿ ಬಾಂಬ್' ಇರಿಸಿಕೊಂಡು ವಿಮಾನವನ್ನು ಸ್ಫೋಟಗೊಳಿಸುವ ತಂತ್ರದೊಂದಿಗೆ ತರಬೇತಿ ನೀಡಲಾಗಿದೆ ಎಂದು ಇತ್ತೀಚೆಗಷ್ಟೇ ಅಮೆರಿಕದ ವಿಮಾನವನ್ನು ಸ್ಫೋಟಗೊಳಿಸುವ ವಿಫಲ ಯತ್ನ ನಡೆಸಿ ಸೆರೆ ಸಿಕ್ಕಿರುವ ನೈಜೀರಿಯಾದ ಉಮರ್ ತನಿಖೆಯ ವೇಳೆಯಲ್ಲಿ ಬಾಯ್ಬಿಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಕ್ರಿಸ್‌ಮಸ್ ದಿನದಂದು ಅಮೆರಿಕದ ವಿಮಾನವನ್ನು ಸ್ಫೋಟಗೊಳಿಸಲು ಯತ್ನಿಸಿದ್ದ ಸಂದರ್ಭದಲ್ಲಿ ನೈಜೀರಿಯಾದ ಉಮರ್ ಫಾರೂಕ್ ಅಬ್ದುಲ್‌ಮುತಲ್ಲಾಬ್ ತನಿಖೆ ವೇಳೆಯಲ್ಲಿ ಮತ್ತಷ್ಟು ವಿವರಗಳನ್ನು ತಿಳಿಸಿರುವುದಾಗಿ ಬ್ರಿಟಿಷ್ ಗುಪ್ತಚರ ಇಲಾಖೆ ಖಚಿತಪಡಿಸಿರುವುದಾಗಿ ಸಿಬಿಎಸ್ ನ್ಯೂಸ್ ತನ್ನ ವರದಿಯಲ್ಲಿ ಹೇಳಿದೆ.

ಅಲ್ ಖಾಯಿದಾ ಉಗ್ರಗಾಮಿ ಸಂಘಟನೆ ಯೆಮೆನ್‌ನಲ್ಲಿ ಮತ್ತಷ್ಟು ದಾಳಿಕೋರರನ್ನು ಸಜ್ಜುಗೊಳಿಸಿರುವುದು ಡಿಸೆಂಬರ್ 25ರ ಘಟನೆಯಿಂದ ಬಯಲಾಗಿದೆ ಎಂದು ಸಿಬಿಎಸ್ ನ್ಯೂಸ್‌ನ ರಾಷ್ಟ್ರೀಯ ಭದ್ರತಾ ವಿಶ್ಲೇಷಣಕಾರ ಜುವಾನ್ ಜಾರೆಟ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ