ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 'ಮುಷ್ ಬಾಂಗ್ಲಾದಲ್ಲಿ ಉಲ್ಫಾ ಮುಖಂಡನ ಭೇಟಿ ಮಾಡಿದ್ರು' (Musharraf | Dhaka | ULFA | ISI | Pakistan | Khaleda Zia)
Bookmark and Share Feedback Print
 
ಬಾಂಗ್ಲಾದಲ್ಲಿ ಮಾಜಿ ಪ್ರಧಾನಿ ಖಾಲೀದಾ ಜಿಯಾ ಅವರು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಅವರು ಬಾಂಗ್ಲಾದಲ್ಲಿ ಬಂಧಿತನಾಗಿದ್ದ ಉಲ್ಫಾ ಮುಖಂಡ ಅನುಪ್ ಚೇಟಿಯಾನನ್ನು ರಹಸ್ಯವಾಗಿ ಭೇಟಿಯಾಗಿ ಮಾತುಕತೆ ನಡೆಸಿರುವುದಾಗಿ ಹಿರಿಯ ಸಚಿವರೊಬ್ಬರು ಗಂಭೀರವಾಗಿ ಆರೋಪಿಸಿದ್ದಾರೆ.

ಉಲ್ಫಾ ಮುಖಂಡನನ್ನು ಸೆರೆ ಹಿಡಿದು ಸೆಂಟ್ರಲ್ ಜೈಲಿನಲ್ಲಿ ಇಟ್ಟ ಸಂದರ್ಭದಲ್ಲಿ ಮುಷರ್ರಫ್ ಬಾಂಗ್ಲಾಕ್ಕೆ ಭೇಟಿ ಕೊಟ್ಟಿದ್ದರು. ಆ ಸಂದರ್ಭದಲ್ಲಿ ಅನುಪ್ ಜೊತೆ ಶೆರಟಾನ್ ಹೋಟೆಲ್‌ನಲ್ಲಿ ಅಧ್ಯಕ್ಷರಾಗಿದ್ದ ಮುಷ್ ಚರ್ಚೆ ನಡೆಸಿದ್ದರು ಎಂದು ಸಚಿವ ಅಶ್ರಫುಲ್ ಇಸ್ಲಾಮ್ ದೂರಿದ್ದಾರೆ.

ಮುಷ್ ಅವರು ಅನುಪ್ ಜೊತೆ ಸುಮಾರು ಒಂದೂವರೆ ಗಂಟೆಗಳ ಕಾಲ ಮಾತುಕತೆ ನಡೆಸಿದ್ದರು. ಆಗ ಆಡಳಿತಾರೂಢ ಅವಾಮಿ ಲೀಗ್‌ನ ಪ್ರಧಾನ ಕಾರ್ಯದರ್ಶಿ ಕೂಡ ಜತೆಗಿದ್ದರು ಎಂದು ಶುಕ್ರವಾರ ಭಾರತ-ಬಾಂಗ್ಲಾ ಸಂಬಂಧ ಕುರಿತು ನಡೆದ ಚರ್ಚೆಯ ಸಂದರ್ಭದಲ್ಲಿ ಸಚಿವರು ಸ್ಫೋಟಕ ಮಾಹಿತಿಯನ್ನು ಬಹಿರಂಗಗೊಳಿಸಿದ್ದಾರೆ.

1996ರಿಂದ 2001ರವರೆಗಿನ ಅವಾಮಿ ಲೀಗ್ ಆಡಳಿತ ಸಂದರ್ಭದಲ್ಲಿ ಅನುಪ್‌ನನ್ನು ಢಾಕಾದಲ್ಲಿ ಸೆರೆ ಹಿಡಿಯಲಾಗಿತ್ತು ಎಂದಿರುವ ಸಚಿವರು, ಪ್ರಸ್ತುತ ಉಲ್ಫಾ ಮುಖಂಡ ಸೆಕ್ಯುರಿಟಿ ಕಸ್ಟಡಿಯಲ್ಲಿರುವುದಾಗಿ ವಿವರಿಸಿದರು. ಅಲ್ಲದೇ ಉಗ್ರರು ಮತ್ತು ಪಾಕಿಸ್ತಾನ್ ಇಂಟೆಲಿಜೆನ್ಸ್ ಸರ್ವಿಸ್(ಐಎಸ್‌ಐ) ನಡುವಿನ ಗಳಸ್ಯ-ಕಂಠಸ್ಯ ಸಂಬಂಧವನ್ನೂ ಕೂಡ ಹೊರಗೆಡವಿಹಿದರು.
ಸಂಬಂಧಿತ ಮಾಹಿತಿ ಹುಡುಕಿ