ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತವನ್ನು ಎದುರಿಸಲು ಪಾಕ್ ಆರ್ಮಿಗೆ ಮತ್ತಷ್ಟು ನೆರವು (Pakistan | India | Asif Ali Zardari | Yousuf Raza)
Bookmark and Share Feedback Print
 
ಭಾರತದ ಪ್ರತಿರೋಧದ ಬೆದರಿಕೆಯನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ಹಾಗೂ ಆಧುನಿಕ ಉಪಕರಣಗಳ ಖರೀದಿಗಾಗಿ ಪಾಕಿಸ್ತಾನ ಸರ್ಕಾರ 2009-10ರ ಪ್ರಸಕ್ತ ಸಾಲಿನ ರಕ್ಷಣಾ ಬಜೆಟ್‌ನಲ್ಲಿ ಆರ್ಮಿಗೆ ಹೆಚ್ಚುವರಿಯಾಗಿ 35ಬಿಲಿಯನ್ ಡಾಲರ್‌ನಷ್ಟು ಹಣವನ್ನು ಕಾಯ್ದಿರಿಸಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.

ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಹೆಚ್ಚುವರಿ ಹಣವನ್ನು ಕಾಯ್ದಿರಿಸುವ ಮೂಲಕ ಪಾಕಿಸ್ತಾನದ ರಕ್ಷಣಾ ಬಜೆಟ್ ಮೊತ್ತ 378ಬಿಲಿಯನ್ ಡಾಲರ್‌ಗೆ ಏರಿಕೆ ಕಂಡಿದೆ. 2009-10ರ ಜೂನ್ ತಿಂಗಳ ರಕ್ಷಣಾ ಬಜೆಟ್‌ನಲ್ಲಿ ಪಾಕಿಸ್ತಾನ 342.9ಬಿಲಿಯನ್‌ಗೆ ಏರಿಸಿತ್ತು, ಹಿಂದಿನ ವರ್ಷದ ಬಜೆಟ್‌ನಲ್ಲಿ 296ಬಿಲಿಯನ್ ಡಾಲರ್ ನೀಡಲಾಗಿತ್ತು. ಆ ನಿಟ್ಟಿನಲ್ಲಿ ಪ್ರಸಕ್ತ ಸಾಲಿನ ರಕ್ಷಣಾ ಬಜೆಟ್‌ನಲ್ಲಿ ಶೇ.15.3ರಷ್ಟು ಹೆಚ್ಚಳ ಕಂಡಿದೆ.

ಭಾರತ ಪದೇ, ಪದೇ ಸಮರ ಸಾರುವುದಾಗಿ ಪರೋಕ್ಷವಾಗಿ ಬೆದರಿಕೆ ಹಾಕುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಪಾಕ್ ಮಿಲಿಟರಿಯನ್ನು ಮತ್ತಷ್ಟು ಶಸಕ್ತಗೊಳಿಸಲು ಹೆಚ್ಚುವರಿ ಆರ್ಥಿಕ ನೆರವು ನೀಡಬೇಕು ಎಂದು ಆರ್ಮಿ ವರಿಷ್ಠ ಜನರಲ್ ಅಶ್ಫಾಕ್ ಪರ್ವೆಜ್ ಕಯಾನಿ, ಜ.ತಾರಿಕ್ ಮಜೀದ್ ಅವರ ಬೇಡಿಕೆಯಂತೆ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಮತ್ತು ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಅವರು ಆರ್ಮಿಗೆ 35ಬಿಲಿಯನ್ ಡಾಲರ್ ನೆರವಿನ ಬಜೆಟ್‌ಗೆ ಗ್ರೀನ್ ಸಿಗ್ನಲ್ ನೀಡಿರುವುದಾಗಿ ಡಾನ್ ನ್ಯೂಸ್ ಚಾನೆಲ್ ಮೂಲವೊಂದು ತಿಳಿಸಿರುವುದಾಗಿ ವರದಿಯಲ್ಲಿ ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ