ಇತ್ತೀಚೆಗಷ್ಟೇ ದುಬೈನಲ್ಲಿ ಅನಾವರಣಗೊಂಡ ವಿಶ್ವದ ಅತೀ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾದ ಮೇಲಿನಿಂದ ಸಾಹಸಿಗಳಿಬ್ಬರು ಪ್ಯಾರಚೂಟ್ ಬಳಸಿ ಕೆಳಕ್ಕೆ ಜಿಗಿಯುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.
ನಾಸಿರ್ ಅಲ್ ನಾಯಾದಿ ಹಾಗೂ ಒಮರ್ ಅಲ್ ಹೆಗೆಲಾನ್ ಎಂಬ ಇಬ್ಬರು ಉತ್ಸಾಹಿ ಯುವಕರು 672ಮೀಟರ್ ಎತ್ತರದ ಬುರ್ಜ್ ಖಲೀಫಾದ ಮೇಲಿಂದ ಕೆಳಕ್ಕೆ ಧುಮುಕಿ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ. ಇಬ್ಬರು ಗಂಟೆಗೆ 220ಕಿ.ಮೀ.ವೇಗದಲ್ಲಿ ಪ್ಯಾರಾಚೂಟ್ ಕಟ್ಟಿಕೊಂಡು ಕೇವಲ ಒಂದೂವರೆ ನಿಮಿಷದಲ್ಲಿ ಮೇಲಿನಿಂದ ಕೆಳಕ್ಕೆ ನೆಗೆದ ಅವರು ಸುರಕ್ಷಿತವಾಗಿ ನೆಲಕ್ಕೆ ಇಳಿದಿದ್ದರು.
ನಾಸಿರ್ 2007ರಲ್ಲಿ ನಡೆದ ಆಕಾಶ ಜಿಗಿತ ಸ್ಪರ್ಧೆಯಲ್ಲಿ ಗೆದ್ದು ಯುಎಇ ನ್ಯಾಷನಲ್ ಚಾಂಪಿಯನ್ ಆಗಿದ್ದರು. ಒಮರ್ ಖಾಸಗಿಯಾಗಿ ಕೌಲಾಲಂಪುರದಲ್ಲಿರುವ ಪೆಟ್ರೋನಾಸ್ ಟವರ್‌ನಿಂದ ಯಶಸ್ವಿಯಾಗಿ ಜಿಗಿದಿದ್ದರು. ತನಗೆ ಇಂತಹ ಸಾಹಸ ಮಾಡುವುದು ಹೆಮ್ಮೆಯ ವಿಷಯ ಎಂದು ನಾಸಿರ್ ತಿಳಿಸಿದ್ದಾರೆ.