ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಒಸಾಮಾ ಬಿನ್ ಲಾಡೆನ್ ಪೂರ್ವದೇಶದ 'ಚೆ' ಗುವೇರಾ! (Che Guevera | CIA bomber | Afghanistan | Defne Bayrak)
Bookmark and Share Feedback Print
 
ಅಲ್ ಖಾಯಿದಾದ ಸ್ಥಾಪಕ ಒಸಾಮಾ ಬಿನ್ ಲಾಡೆನ್ ಅಮೆರಿಕ ಸೇರಿದಂತೆ ವಿಶ್ವದ ಹಲವಾರು ದೇಶಗಳಿಗೆ ಉಗ್ರನಾಗಿದ್ದರೆ, ಭಯೋತ್ಪಾದಕರ ಸಂಘಟನೆಗಳಿಗೆ ಆತ ಆರಾಧ್ಯ ದೈವ. ಇದೀಗ ಆತನಿಗೆ ಮತ್ತೊಂದು ಬಿರುದು ಕೂಡ ಲಭಿಸಿದೆ. ಒಸಾಮಾ ಬಿನ್ ಲಾಡೆನ್ ಪೂರ್ವದೇಶದ ಚೆ ಗುವೇರಾ ಎಂಬುದಾಗಿ!

ಕ್ರಾಂತಿಯ ಕಹಳೆ ಮೊಳಗಿಸಿದ್ದ 'ಚೆ' ಗುವೇರಾ ಮತ್ತು ಫಿಡೆಲ್ ಕ್ಯಾಸ್ಟ್ರೋ ಇಬ್ಬರು ಒಂದೇ ನಾಣ್ಯದ ಎರಡು ಮುಖಗಳು. ಆದರೆ ಉಗ್ರ ಲಾಡೆನ್ ಬಗ್ಗೆ ಇಂತಹ ತಲೆಬರಹದ ಪುಸ್ತಕವನ್ನು ಬರೆದಾಕೆ, ಇತ್ತೀಚೆಗಷ್ಟೇ ಅಮೆರಿಕದ ಸಿಐಎ ಏಜೆಂಟರನ್ನು ಕೊಂದ ಆತ್ಮಹತ್ಯಾ ಬಾಂಬರ್ ಕಂ ಜೋರ್ಡಾನ್ ವೈದ್ಯ ಹುಮಾಮ್ ಖಲೀಲ್ ಅಬು ಮುಲಾಲ್ ಅಲ್ ಬಾಲ್ವಿ ಪತ್ನಿ ಡೆಫ್ನೆ ಬೇರಾಕ್.

ಅಫ್ಘಾನಿಸ್ತಾನದಲ್ಲಿರುವ ಸಿಐಎ ನೆಲೆ ಮೇಲೆ ಆತ್ಮಹತ್ಯಾ ಬಾಂಬರ್ ದಾಳಿ ನಡೆಸುವ ಮೂಲಕ ಏಳು ಮಂದಿ ಸಾವನ್ನಪ್ಪಿದ್ದರು. ಅಮೆರಿಕದ ವಿರುದ್ಧ ಇಸ್ಲಾಮ್‌ನ ಪವಿತ್ರ ಯುದ್ಧಕ್ಕಾಗಿ ತನ್ನ ಗಂಡ ಹುತಾತ್ಮರಾಗಿರುವುದಾಗಿ ಡೆಫ್ನೆ ಅಭಿಪ್ರಾಯ ವ್ಯಕ್ತಪಡಿಸಿದ್ದಾಳೆ.

ಜೋರ್ಡಾನ್‌ನ ಮೂಲದ ಹುಮಾಮ್ ಅಫ್ಘಾನಿಸ್ತಾನದಲ್ಲಿ ವೈದ್ಯನಾಗಿ ಕಾರ್ಯನಿರ್ವಹಿಸುತ್ತಿದ್ದಾತ, ಆತ್ಮಹತ್ಯಾ ಬಾಂಬರ್ ಆಗಿ ಪರಿವರ್ತನೆಗೊಂಡಿದ್ದ. ಈತನ ಪತ್ನಿ ಡೆಫ್ನೆ ಟರ್ಕಿ ಮೂಲದವಳು.

ಡಿಸೆಂಬರ್ 30ರಂದು ಏಳು ಮಂದಿ ಸಿಐಎ ಏಜೆಂಟರನ್ನು ಹತ್ಯೆಗೈದು ತಾನು ಸಾಯುವ ಮೂಲಕ ತನ್ನ ಗಂಡ ಹುತಾತ್ಮರಾಗಿದ್ದಾರೆ ಎಂದು ತಿಳಿಸಿದ್ಧಾಳೆ. ಅಲ್ಲದೇ, ಅಮೆರಿಕದ ವಿರುದ್ಧದ ಈ ಯುದ್ಧ ನಿರಂತರವಾಗಿ ಮುಂದುವರಿಯಲಿದೆ ಎಂಬುದಾಗಿಯೂ ಹೇಳಿದ್ದಾಳೆ.
ಸಂಬಂಧಿತ ಮಾಹಿತಿ ಹುಡುಕಿ