ಬಾಂಗ್ಲಾದೇಶದ ಸ್ಥಾಪಕರಾಗಿದ್ದ ಶೇಖ್ ಮುಜಿಬುರ್ ರೆಹಮಾನ್ ಹತ್ಯೆಗೈದ ಐದು ಮಂದಿ ಮಿಲಿಟರಿ ಮಾಜಿ ಅಧಿಕಾರಿಗಳಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಮೂರು ಮಂದಿ ಅಧಿಕಾರಿಗಳು ತಮಗೆ ರಾಷ್ಟ್ರಪತಿಯಿಂದ ಕ್ಷಮಾದಾನ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಬಾಜ್‌ಲುಲ್ ಹುಡಾ, ಮೊಹಿಯುದ್ದೀನ್ ಅಹ್ಮದ್ ಹಾಗೂ ಎಕೆಎಂ ಮೊಹಿಯುದ್ದೀನ್ ಕ್ಷಮಾದಾನ ಕೋರಿದ ಮೂವರು ಅಧಿಕಾರಿಗಳಾಗಿದ್ದಾರೆ.