ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನಾನು ಆರೋಪಿಯಲ್ಲ: ಉಲ್ಟಾ ಹೊಡೆದ ಉಮರ್ (Al-Qaida | Pakistan | Yemen | Farook | America)
Bookmark and Share Feedback Print
 
ಅಮೆರಿಕದ ವಿಮಾನ ಸ್ಫೋಟಿಸುವ ಯತ್ನದ ಆರೋಪವನ್ನು ಬಂಧಿತ ನೈಜೀರಿಯಾದ ಪ್ರಜೆ ಉಮರ್ ಫಾರೂಕ್ ಅಬ್ದುಲ್‌ಮುತ್ತಾಲಬ್ ಮಿಚಿಗನ್ ನ್ಯಾಯಾಲಯದಲ್ಲಿ ತಳ್ಳಿಹಾಕಿದ್ದಾನೆ.

ಉಮರ್ ವಿರುದ್ಧ ಅಮೆರಿಕದ ಪೊಲೀಸರು ಸಿಕ್ಸ್ ಕೌಂಟ್ ಮಟ್ಟದ ಆರೋಪವನ್ನು ದಾಖಲಿಸಿದ್ದರು. ಇದರಲ್ಲಿ ಕ್ರಿಸ್‌ಮಸ್ ದಿನ 300 ಜನರಿದ್ದ ವಿಮಾನ ಸ್ಫೋಟಿಸುವ ಯತ್ನ ಕೂಡ ಸೇರಿತ್ತು.

ಶನಿವಾರ ಮಿಚಿಗನ್ ನ್ಯಾಯಾಲಯಕ್ಕೆ ಉಮರ್‌ನನ್ನು ಹಾಜರುಪಡಿಸಲಾಗಿತ್ತು. ಪೊಲೀಸರು ನನ್ನ ವಿರುದ್ಧ ದಾಖಲಿಸಿರುವ ಆರೋಪಗಳು ಸುಳ್ಳು ಎಂದು ಉಮರ್ ಕೋರ್ಟ್‌ಗೆ ತಿಳಿಸಿದ್ದಾನೆಂದು ಮಾಧ್ಯಮಗಳ ವರದಿ ತಿಳಿಸಿದೆ.

ಕ್ರಿಸ್‌ಮಸ್ ದಿನದಂದು ಉಮರ್ ಫಾರೂಕ್ ತನ್ನ ಒಳಚಡ್ಡಿಯಲ್ಲಿ ಸ್ಫೋಟಕವನ್ನು ಇರಿಸಿಕೊಂಡು ಅಮೆರಿಕದ ವಿಮಾನವನ್ನು ಧ್ವಂಸಗೊಳಿಸುವ ವಿಫಲ ಯತ್ನ ನಡೆಸಿ ಎಫ್‌ಬಿಐಗೆ ಸೆರೆ ಸಿಕ್ಕಿದ್ದ. ಅಲ್ಲದೇ, ಯೆಮೆನ್‌ನಲ್ಲಿ ಇನ್ನಷ್ಟು ಯುವಕರಿಗೆ ತರಬೇತಿ ಅಲ್ ಖಾಯಿದಾ ತರಬೇತಿ ಕೂಡ ನೀಡಿದೆ ಎಂದು ತನಿಖೆ ವೇಳೆಯಲ್ಲಿ ಬಾಯ್ಬಿಟ್ಟಿದ್ದ. ಇದೀಗ ಕೋರ್ಟ್‌ನಲ್ಲಿ ಉಲ್ಟಾ ಹೊಡೆದಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ