ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಛೇ...ನಾವು ರಾಕೆಟ್ ದಾಳಿ ನಡೆಸಿಲ್ಲ: ಪಾಕ್ ಉವಾಚ (India | Pakistan | Border firing | Islamabad | Wagah)
Bookmark and Share Feedback Print
 
'ಗಡಿಪ್ರದೇಶದಿಂದ ನಾವು ಭಾರತೀಯ ಸೇನೆ ಮೇಲೆ ರಾಕೆಟ್ ದಾಳಿ ನಡೆಸಿಲ್ಲ, ಭಾರತದ ಮಿಲಿಟರಿಯೇ ನಮ್ಮ ಮೇಲೆ ದಾಳಿ ನಡೆಸಿದೆ' ಎಂದು ಪಾಕಿಸ್ತಾನದ ಭದ್ರತಾ ಪಡೆಯ ವಕ್ತಾರ ಆರೋಪಿಸಿದ್ದು, ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಭಾರತ ತಿರುಗೇಟು ನೀಡಿದೆ.

ಶನಿವಾರ ಬೆಳಿಗ್ಗೆ ವಾಘಾ ಗಡಿಯಲ್ಲಿ ನಡೆದ ದಾಳಿಯಲ್ಲಿ ಯೂರೊಬ್ಬರೂ ಗಾಯಗೊಂಡಿಲ್ಲ. ಆದರೆ ಭಾರತದ ಕ್ರಮದ ವಿರುದ್ಧ ಪಾಕಿಸ್ತಾನ ಗಡಿಭದ್ರತಾ ಪಡೆ ಪ್ರತಿಭಟಿಸಲಿದೆ ಎಂದು ಪಾಕ್ ಹೇಳಿದೆ.

ಶುಕ್ರವಾರ ಮಧ್ಯರಾತ್ರಿ ವೇಳೆ ಪಾಕಿಸ್ತಾನ ಪಡೆಗಳು ನಾಲ್ಕು ರಾಕೆಟ್ ದಾಳಿ ನಡೆಸಿರುವುದಾಗಿ ಭಾರತೀಯ ಗಡಿ ಭದ್ರತಾ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯನ್ನು ನಾವು ಪ್ರಬಲವಾಗಿ ಖಂಡಿಸುವುದಾಗಿ ಹೇಳಿರುವ ಭಾರತ, ದಾಳಿ ಕುರಿತು ಪಾಕಿಸ್ತಾನದೊಂದಿಗೆ ಚರ್ಚಿಸುವುದಾಗಿಯೂ ತಿಳಿಸಿದೆ.

ಶನಿವಾರ ಮುಂಜಾನೆ ಜಮ್ಮು-ಕಾಶ್ಮೀರದ ಪರ್ಗಾವಲ್ ಅಂತಾರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಪಾಕಿಸ್ತಾನಿ ಪಡೆಗಳು ಭಾರೀ ರಾಕೆಟ್ ಮತ್ತು ಗುಂಡಿನ ದಾಳಿ ನಡೆಸಿತ್ತು. ಇದೇ ರೀತಿ ಪಂಜಾಬ್ ಗಡಿ ಪ್ರದೇಶದಲ್ಲಿ ಪಾಕ್ ರಾಕೆಟ್ ದಾಳಿ ಮಾಡಿತ್ತು.
ಸಂಬಂಧಿತ ಮಾಹಿತಿ ಹುಡುಕಿ