ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನೆರೆ ರಾಷ್ಟ್ರದ ವಿರುದ್ಧ ಅಫ್ಘಾನ್ ನೆಲದ ಬಳಕೆ ಇಲ್ಲ: ಜರ್ದಾರಿ (Afghanistan | Zardari | Islamabad | Pakistan)
Bookmark and Share Feedback Print
 
ಅಫ್ಘಾನಿಸ್ತಾನದ ಪ್ರಾದೇಶಿಕ ಭದ್ರತೆಗೆ ಪಾಕಿಸ್ತಾನ ಕಾಳಜಿ ವಹಿಸುವುದಾಗಿ ಭರವಸೆ ನೀಡಿರುವ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ, ಅಫ್ಘಾನಿಸ್ತಾನದ ನೆಲದಲ್ಲಿ ವಿದೇಶಿ ರಾಷ್ಟ್ರಗಳ ವಿರುದ್ಧ ಹೋರಾಡುವ ಶಕ್ತಿಗಳಿಗೆ ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ.

ಅಫ್ಘಾನಿಸ್ತಾನದಲ್ಲಿನ ಪ್ರಾದೇಶಿಕ ಭದ್ರತೆ ಮತ್ತು ಶಾಂತಿ ಹಾಗೂ ದೃಢತೆಗಾಗಿ ಎಲ್ಲ ರೀತಿಯ ನೆರವು ನೀಡುವುದಾಗಿ ಕರಾಚಿಗೆ ಭೇಟಿ ನೀಡಿದ್ದ ಡೇವಿಡ್ ಮಿಲಿಬಂದ್ ಭೇಟಿ ನೀಡಿದ ಸಂದರ್ಭದಲ್ಲಿ ಅವರೊಂದಿಗೆ ಮಾತುಕತೆ ನಡೆಸಿದ ಜರ್ದಾರಿ ಈ ಆಶ್ವಾಸನೆ ನೀಡಿದ್ದಾರೆ.

ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ವಿಶ್ವ ಸಮುದಾಯ ದೊಡ್ಡ ಸಹಾಯವನ್ನೇ ಮಾಡಿರುವುದಾಗಿ ಅವರು ಹೇಳಿದರು.

ಪಾಕಿಸ್ತಾನದಲ್ಲಿರುವ ಅಫ್ಘಾನಿಸ್ತಾನದ ಸುಮಾರು ಎರಡು ಮಿಲಿಯನ್ ನಿರಾಶ್ರಿತರು ಮತ್ತೆ ತಾಯ್ನಾಡಿಗೆ ಮರಳುವ ಪ್ರಕ್ರಿಯೆಗೆ ಅಫ್ಘಾನ್ ಶಾಂತಿ ಮತ್ತು ಏಕೀಕರಣ ಯೋಜನಾ ಸಮಿತಿ ಈ ಪ್ರಕ್ರಿಯೆಗೆ ಚಾಲನೆ ನೀಡಲು ಮುಂದಾಗಬೇಕೆಂದು ಕರೆ ನೀಡಿದರು.

ಈ ವಿಷಯ ಕುರಿತು ಜನವರಿ 28ರಂದು ಅಫ್ಘಾನಿಸ್ತಾನ ಲಂಡನ್ ಕಾನ್ಫರೆನ್ಸ್‌ನಲ್ಲಿ ಧ್ವನಿ ಎತ್ತಲಿದೆ. ಅಫ್ಘಾನ್ ಸಮಾವೇಶದಲ್ಲಿ ದ್ವಿಪಕ್ಷೀಯ, ಪ್ರಾದೇಶಿ ವಿವಾದ ಹಾಗೂ ಉಗ್ರರ ದಮನದ ಕುರಿತು ಚರ್ಚೆ ನಡೆಯಲಿದೆ.
ಸಂಬಂಧಿತ ಮಾಹಿತಿ ಹುಡುಕಿ