ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಗಡಿಪ್ರದೇಶ ಈಗಲೂ ಕೂಡ ಅಲ್ ಖಾಯಿದಾ ಭಯೋತ್ಪಾದನಾ ಚಟುವಟಿಕೆಗಳ ಪ್ರಮುಖ ತಾಣವಾಗಿದೆ ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಪುನರುಚ್ಚರಿಸಿದ್ದಾರೆ.
ಆದರೆ ಯೆಮೆನ್‌ಗೆ ಮಿಲಿಟರಿ ಪಡೆಯನ್ನು ಕಳುಹಿಸುವುದಿಲ್ಲ ಎಂದು ಒಬಾಮಾ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ. ಅಫ್ಘಾನ್ ಮತ್ತು ಪಾಕಿಸ್ತಾನ ಗಡಿಭಾಗ ಪ್ರಸ್ತುತವಾಗಿಯೂ ಅಲ್ ಖಾಯಿದಾ ಉಗ್ರರ ಕಾರಸ್ಥಾನವಾಗಿದೆ ಎಂದು ಪೀಪಲ್ ಮ್ಯಾಗಜೀನ್ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಅಲ್ಲದೇ, ಅಲ್ ಖಾಯಿದಾದ ಯೆಮೆನ್‌ನಲ್ಲಿರುವ ಗುಂಪು ಕೂಡ ದೊಡ್ಡ ತಲೆನೋವಾಗಿ ಪರಿಣಮಿಸಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಒಬಾಮಾ, ಯೆಮೆನ್‌ಗೆ ಮಿಲಿಟರಿ ಪಡೆಯ ಕಳುಹಿಸುವ ಸುದ್ದಿಯನ್ನು ತಳ್ಳಿಹಾಕಿದ್ದಾರೆ.
ಅಮೆರಿಕದ ಜನರ ಸುರಕ್ಷತೆಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಗೂ ಕಾನೂನುರಹಿತ ದೇಶಗಳಲ್ಲಿನ ಚಟುವಟಿಕೆಯನ್ನು ಹತ್ತಿಕ್ಕಲು ಹೆಚ್ಚಿನ ಮುತುವರ್ಜಿ ವಹಿಸುವುದಾಗಿಯೂ ಈ ಸಂದರ್ಭದಲ್ಲಿ ಹೇಳಿದರು.