ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ವೈದ್ಯ,ಇಂಜಿನಿಯರ್: ಐಎಸ್‌ಐ ಕಟ್ಟಡ ದಾಳಿ ಮಾಸ್ಟರ್ ಮೈಂಡ್ ! (South Waziristan | ISI headquarters | Doctor | Lahore)
Bookmark and Share Feedback Print
 
ಕಳೆದ ವರ್ಷ ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್‌ಐ ಹೆಡ್‌ಕ್ವಾರ್ಟಸ್ ಮೇಲೆ ದಾಳಿಯ ಹಿಂದೆ ವೈದ್ಯ ಮತ್ತು ಕೆಮಿಕಲ್ ಇಂಜಿನಿಯರ್ ಮಾಸ್ಟರ್ ಮೈಂಡ್ ಆಗಿರುವುದಾಗಿ ಹೇಳಿರುವ ಅಧಿಕಾರಿಯೊಬ್ಬರು ಅವರಿಬ್ಬರು ಪಾಕ್‌ನ ಹೃದಯಭಾಗವಾದ ಪಂಜಾಬ್ ಪ್ರಾಂತ್ಯಕ್ಕೆ ಸೇರಿದರೆನ್ನುವುದನ್ನು ಪತ್ತೆ ಹಚ್ಚಿರುವುದಾಗಿ ಹೇಳಿದ್ದಾರೆ.

ಲಾಹೋರ್‌ನ ಪ್ರತಿಷ್ಠಿತ ಯೂನಿರ್ವಸಿಟಿ ಆಫ್ ಇಂಜಿನಿಯರಿಂಗ್ ಹಾಗೂ ಟೆಕ್ನಾಲಜಿಯಲ್ಲಿ ವಿದ್ಯಾಭ್ಯಾಸ ಮಾಡಿದ್ದ ಅಸಿಫ್ ಎಂಬಾತನನ್ನು ಈಗಾಗಲೇ ಸೆರೆ ಹಿಡಿಯಲಾಗಿದೆ. ಮತ್ತೊಬ್ಬ ಮಾಸ್ಟರ್ ಮೈಂಡ್ ಆಗಿರುವ ವೈದ್ಯ ಮಾಜ್ ಎಂದು ಗುರುತಿಸಲಾಗಿದ್ದು, ಆತ ನಾಪತ್ತೆಯಾಗಿರುವುದಾಗಿ ಅಪರಾಧ ತನಿಖಾ ದಳದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೆಲವು ವರ್ಷಗಳ ಹಿಂದಷ್ಟೇ ಮಾಜ್ ಫೈಸಲಾಬಾದ್ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪೂರೈಸಿದ್ದ. ಮೊಹಮ್ಮದ್ ಅಸಿಫ್ ಲಾಹೋರ್ ಯೂನಿರ್ವಸಿಟಿ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ವಿದ್ಯಾಭ್ಯಾಸ ಪಡೆದಿದ್ದ. ಇವರಿಬ್ಬರು ಐಎಸ್‌ಐ ಕಟ್ಟಡದ ದಾಳಿಯ ಪ್ರಮುಖ ರೂವಾರಿಗಳಾಗಿದ್ದಾರೆ ಎಂದು ವಿವರಿಸಿದ್ದಾರೆ.

ಅಸಿಫ್ ಪ್ರಸ್ತುತ ಕಸ್ಟಡಿಯಲ್ಲಿದ್ದು, ಮಾಜ್ ತಲೆತಪ್ಪಿಸಿಕೊಂಡಿರುವುದಾಗಿ ಹೇಳಿರುವ ಅಧಿಕಾರಿಗಳು, ಆತ ದಕ್ಷಿಣ ವಜಿರಿಸ್ತಾನಕ್ಕೆ ಪರಾರಿಯಾಗಿರಬೇಕೆಂದು ಶಂಕಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ