ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬ್ರಿಸ್ಬೇನ್ ಕಾಲುವೆಯಲ್ಲಿ ಭಾರತೀಯಳ ಶವ ಪತ್ತೆ (Brisbane | Indian woman | Australia | Punjab)
Bookmark and Share Feedback Print
 
ಭಾರತೀಯರ ಮೇಲೆ ನಡೆಯುತ್ತಿರುವ ನಿರಂತರ ಜನಾಂಗೀಯ ದಾಳಿಯ ಆತಂಕದ ನಡುವೆಯೇ, ಆಸ್ಟ್ರೇಲಿಯಾದ ಬ್ರಿಸ್ಬೇನ್ಕಾಲುವೆಯ ಸಮೀಪ ವಿವಾಹಿತ ಭಾರತೀಯ ಮಹಿಳೆಯ ಮೃತದೇಹ ಪತ್ತೆಯಾಗಿದೆ.

ಮೃತಳನ್ನು ಪಂಜಾಬ್ ಮೂಲದ ಅಮನ್‌ದೀಪ್ ಕೌರ್(21) ಎಂದು ಗುರುತಿಸಲಾಗಿದೆ. ಮೃತಳ ಹಣೆಯ ಮೇಲೆ ಆಳವಾದ ಗಾಯದ ಗುರುತಿದ್ದು, ಈಕೆಯನ್ನು ಕೊಲೆ ಮಾಡಿ ಕಾಲುವೆಯ ಬಳಿ ಬಿಸಾಡಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಪ್ರಕರಣ ಸಂಬಂಧಿಸಿದಂತೆ ಆಸ್ಟ್ರೇಲಿಯಾ ಪೊಲೀಸರು ಮೃತಳ ಪತಿ ರಾಣಾ ಪರದೀಪ್‌ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಂತರ ಬಿಡುಗಡೆ ಮಾಡಿದ್ದಾರೆ.

ಈಕೆ ಈ ಹಿಂದೆ ಅನೇಕ ಸಲ ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದಳು ಎಂದು ಪತಿ ವಿಚಾರಣೆ ವೇಳೆ ತಿಳಿಸಿದ್ದಾನೆ. ಆದರೆ ಆಕೆಯ ಹಣೆಯ ಮೇಲಿರುವ ಗಾಯದ ಗುರುತು ನೋಡಿದರೆ, ಆಕೆಯನ್ನು ಯಾರಾದರೂ ಕೊಲೆ ಮಾಡಿ ಕಾಲುವೆಗೆ ಬಿಸಾಡಿ ಹೋಗಿರಬಹುದೆಂದು ಅಮನ್‌ದೀಪ್ ಕೌರ್ ಚಿಕ್ಕಪ್ಪ ಮಹೀಂದರ್ ಪಾಲ್ ಶಂಕೆ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ