ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಗಾಜಾ ಉಗ್ರರಿಗೆ ಹಮಾಸ್ ಕಡಿವಾಣ ಹಾಕಲಿ: ಇಸ್ರೇಲ್ (Israel | Hamas | Gaza militant groups | Ehud Barak)
Bookmark and Share Feedback Print
 
ಇಸ್ರೇಲ್ ವಿರುದ್ಧ ಉಗ್ರರು ನಡೆಸುತ್ತಿರುವ ದಾಳಿಗೆ ಗಾಜಾಪಟ್ಟಿ ಆಡಳಿತಾರೂಢ ಹಮಾಸ್ ಕಡಿವಾಣ ಹಾಕಬೇಕೆಂದು ಇಸ್ರೇಲ್ ರಕ್ಷಣಾ ಸಚಿವ ಇಹುದ್ ಬರಾಕ್ ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ಇಸ್ರೇಲ್ ಅವರನ್ನು ಬಗ್ಗುಬಡಿಯಲಿದೆ ಎಂದು ಈ ಸಂದರ್ಭದಲ್ಲಿ ಎಚ್ಚರಿಕೆಯನ್ನೂ ನೀಡಿದ್ದಾರೆ.

ಇತ್ತೀಚೆಗಿನ ದಿನಗಳಲ್ಲಿ ಉಗ್ರರನ್ನು ಮಟ್ಟ ಹಾಕುವಲ್ಲಿ ಹಮಾಸ್ ಆಡಳಿತ ದುರ್ಬಲವಾಗಿದೆ ಎಂದು ದೂರಿರುವ ಅವರು, ಗಾಜಾಪಟ್ಟಿಯಿಂದ ಉಗ್ರರು ಇಸ್ರೇಲ್ ವಿರುದ್ಧದ ಸಮರ ಮುಂದುವರಿಸಿರುವುದಾಗಿ ಹೇಳಿದರು.

ಒಂದೋ ಹಮಾಸ್ ಆಡಳಿತ ಉಗ್ರರಿಗೆ ಕಡಿವಾಣ ಹಾಕುವಲ್ಲಿ ಮುಂದಾಗಬೇಕು ಇಲ್ಲದಿದ್ದರೆ, ಇಸ್ಲಾಂ ಚಳವಳಿಗಾರರು ಶಸ್ತ್ರ ಸಜ್ಜಿತ ಉಗ್ರ ಸಂಘಟನೆ ಮೇಲೆ ನಿಷೇಧ ಹೇರಬೇಕು ಎಂದು ತಿರುಗೇಟು ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ