ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮಲೇಷ್ಯಾದಲ್ಲಿ 40ಸಾವಿರ ಭಾರತೀಯರು ಕಣ್ಮರೆ: ನಜೀಬ್ (Malaysia | Mohd Najib | Indian | journalist | Chennai)
Bookmark and Share Feedback Print
 
ಪ್ರವಾಸಿ ವೀಸಾ ಕಾಲಾವಧಿ ಅಂತ್ಯಗೊಂಡ ನಂತರ ಸುಮಾರು 40ಸಾವಿರ ಭಾರತೀಯರು ಕಣ್ಮರೆಯಾಗಿದ್ದಾರೆ ಎಂದು ಮಲೇಷ್ಯಾದ ಪ್ರಧಾನಿ ಮೊಹ್ದ್ ನಜೀಬ್ ಸೋಮವಾರ ತಿಳಿಸಿದ್ದಾರೆ.

ಈ ಪ್ರಕರಣದ ಕುರಿತು ಮುಂಬರುವ ಭಾರತದ ಭೇಟಿಯ ಸಂದರ್ಭದಲ್ಲಿ ಚರ್ಚಿಸುವುದಾಗಿಯೂ ಹೇಳಿದ್ದಾರೆ. ಅಂದಾಜು 39,046 ಭಾರತೀಯರು ನಾಪತ್ತೆಯಾಗಿದ್ದಾರೆ. ಅವರೆಲ್ಲ ಪ್ರವಾಸಿ ವೀಸಾದ ಮೂಲಕ ಮಲೇಷ್ಯಾಕ್ಕೆ ಆಗಮಿಸಿದ್ದರು.

ಆದರೆ ವೀಸಾ ಅವಧಿ ಮುಗಿದ ಭಾರತೀಯರೆಲ್ಲ ಭಾರತಕ್ಕೆ ಹಿಂತಿರುಗಿರಬೇಕು ಇಲ್ಲವೇ ಮಲೇಷ್ಯಾದಲ್ಲಿಯೇ ಇದ್ದಿರಬೇಕಿತ್ತು. ಇದೀಗ ಅವರು ನಮ್ಮ ದಾಖಲೆಯಲ್ಲೇ ಇಲ್ಲ ಎಂದು ಇಲ್ಲಿಗೆ ಭೇಟಿ ನೀಡಿದ್ದ ಪತ್ರಕರ್ತರೊಂದಿಗೆ ಮಾತನಾಡುತ್ತ ನಜೀಬ್ ವಿಷಯವನ್ನು ಪ್ರಸ್ತಾಪಿಸಿದ್ದಾರೆ.

ಭಾರತೀಯರು ಪ್ರವಾಸಿಗರಾಗಿ ಮಲೇಷ್ಯಾಕ್ಕೆ ಭೇಟಿ ನೀಡುವುದು ನಮಗೆ ಅಗತ್ಯವಾಗಿದೆ. ಆ ಕಾರಣಕ್ಕಾಗಿಯೇ ನಾವು ಉದಾರವಾಗಿದ್ದೇವೆ. ಭಾರತೀಯರಿಗೆ ಮುಕ್ತ ಸ್ವಾಗತವಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ನಜೀಬ್ ಅವರು ಜನವರಿ 19ರಿಂದ ಮೂರು ದಿನಗಳ ಕಾಲ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ