ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನೇಪಾಳ ದೊರೆ ಹತ್ಯೆ ಹಿಂದೆ ಭಾರತದ ಕೈವಾಡ: ಪ್ರಚಂಡ (Prachanda | India | Maoists | Birendra | palace)
Bookmark and Share Feedback Print
 
ನೇಪಾಳ ದೊರೆ ಬೀರೇಂದ್ರ ಹಾಗೂ ಕುಟುಂಬದ ಹತ್ಯೆಯ ಹಿಂದೆ ನೆರೆಯ ಭಾರತದ ಕೈವಾಡ ಇರುವುದಾಗಿ ಮಾಜಿ ಮಾವೋವಾದಿ ಮುಖಂಡ ಪ್ರಚಂಡ ಗಂಭೀರವಾಗಿ ಆರೋಪಿಸಿದ್ದಾರೆ.

ಕೌಟುಂಬಿಕ ಕಲಹದಿಂದಾಗಿ ದೊರೆ ಬೀರೇಂದ್ರ ಅವರ ಪುತ್ರನೇ ಅರಮನೆಯೊಳಗೆ ಹತ್ಯಾಕಾಂಡ ನಡೆಸಿರುವುದಾಗಿ ಆರೋಪಿಸಲಾಗಿತ್ತು. ಆದರೆ ಇದೀಗ ಒಂಬತ್ತು ವರ್ಷಗಳ ನಂತರ ರಾಜಮನೆತನದ ಹತ್ಯಾಕಾಂಡ ಕುರಿತು ಮಾವೋವಾದಿ ಮುಖಂಡರು ಸೇರಿದಂತೆ ಹಲವರು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಇತ್ತೀಚೆಗಿನ ದಿನಗಳಲ್ಲಿ ಮಾವೋವಾದಿ ನಾಯಕರು ಪ್ರತಿಯೊಂದು ವಿಷಯಕ್ಕೂ ಭಾರತದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಇದೀಗ 2001ರ ಜೂನ್ 1ರಂದು ನಡೆದ ದೊರೆ ಬೀರೇಂದ್ರ ಹಾಗೂ ಕುಟುಂಬದ ಹತ್ಯಾಕಾಂಡದ ಹಿಂದೆ ಭಾರತ ಸರ್ಕಾರದ ಪಾತ್ರ ಇರುವುದಾಗಿ ಮಾವೋ ವರಿಷ್ಠ ಪ್ರಚಂಡ ದೂರಿದ್ದಾರೆ.

ಅಲ್ಲದೇ, 1993ರಲ್ಲಿ ನೇಪಾಳದ ಜನಪ್ರಿಯ ಮಾವೋವಾದಿ ಮುಖಂಡ ಮದನ್ ಭಂಡಾರಿ ಹತ್ಯೆಯ ಹಿಂದೆ ಕೂಡ ಭಾರತದ ಕೈವಾಡ ಇರುವುದಾಗಿ ಆರೋಪಿಸಿದರು. ಮದನ್ ಭಂಡಾರಿ ಹಾಗೂ ದೊರೆ ಬೀರೇಂದ್ರ ಅವರು ಭಾರತಕ್ಕೆ ಶರಣಾಗದೇ ಇದ್ದ ಕಾರಣವೇ ಅವರ ಹತ್ಯೆಗೆ ಹೇತುವಾಗಿದೆ ಎಂದು ಮಾವೋ ಮುಖವಾಣಿಯಾದ ಜನಾದೀಶಾ ದಿನಪತ್ರಿಕೆ ಪ್ರಚಂಡ ಹೇಳಿಕೆಯನ್ನು ಉಲ್ಲೇಖಿಸಿ ಮುಖಪುಟದ ವರದಿಯಲ್ಲಿ ವಿವರಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ