ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಆಸ್ಟ್ರೇಲಿಯಾ: ಮತ್ತೆ ಭಾರತೀಯನ ಮೇಲೆ ದಾಳಿ (Racism | Oz-Indian | Indian is thrashed | Sydney)
Bookmark and Share Feedback Print
 
ಆಸ್ಟ್ರೇಲಿಯಾದಲ್ಲಿ ಭಾರತೀಯರ ಮೇಲೆ ಜನಾಂಗೀಯ ದಾಳಿ ಮುಂದುವರಿಯುತ್ತಿರುವ ವಿವಾದದ ನಡುವೆಯೇ ಮಂಗಳವಾರ ಮತ್ತೆ 28ರ ಹರೆಯದ ಭಾರತೀಯ ಯುವಕನೊಬ್ಬನಿಗೆ ಆಸ್ಟ್ರೇಲಿಯಾದ ಗುಂಪೊಂದು ದಾಳಿ ನಡೆಸಿರುವ ಘಟನೆ ಸಿಡ್ನಿ ಬೀಚ್‌ನಲ್ಲಿ ನಡೆದಿದೆ.

ಭಾರತದ ಈ ಯುವಕ ಆಸ್ಟ್ರೇಲಿಯಾದ ಕಾಯಂ ನಿವಾಸಿಯಾಗಿದ್ದು, ದಾಳಿಗೊಳಗಾದ ಯುವಕನ ಗುರುತು ಇನ್ನಷ್ಟೇ ಪತ್ತೆ ಹಚ್ಚಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಸ್ಟ್ರೇಲಿಯಾದ ಯುವಕರ ಗುಂಪೊಂದು ಏಕಾಏಕಿ ಭಾರತೀಯನ ಮೇಲೆ ದಾಳಿ ಮಾಡಿದ್ದಾರೆ. ಹಲ್ಲೆಗೊಳಗಾಗುತ್ತಿರುವ ಸಂದರ್ಭದಲ್ಲಿ ಯುವಕ ನೆರವಿಗಾಗಿ ಅಂಗಲಾಚಿದ್ದು, ಸುಮಾರು 40ನಿಮಿಷಗಳ ನಂತರ ಜನ ಆತನ ಸಹಾಯಕ್ಕೆ ಬಂದಿರುವುದಾಗಿ ಮೂಲಗಳು ತಿಳಿಸಿವೆ.

ದಾಳಿಗೊಳಗಾದ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತನಗೆ ಕುತ್ತಿಗೆ ಮತ್ತು ತಲೆಗೆ ಬಲವಾದ ಹೊಡೆತ ಬಿದ್ದಿರುವುದಾಗಿ ಆತ ತಿಳಿಸಿದ್ದಾನೆ. ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ಜನಾಂಗೀಯ ಹಲ್ಲೆ ನಿರಂತರವಾಗಿ ನಡೆಯುತ್ತಿದೆ. ಈ ಬಗ್ಗೆ ಭಾರತ ಕೂಡ ಹಲ್ಲೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿತ್ತು.

ಆದರೆ ಆಸ್ಟ್ರೇಲಿಯಾದಲ್ಲಿ ಭಾರತೀಯರ ಮೇಲೆ ಜನಾಂಗೀಯ ದಾಳಿ ನಡೆಯುತ್ತಿದೆ ಎಂಬ ಅಂಶವನ್ನು ಅಲ್ಲಗಳೆದಿದ್ದು, ಈ ಬಗ್ಗೆ ಪೂರ್ಣ ತನಿಖೆ ನಡೆಸಿದ ನಂತರವೇ ಭಾರತದ ಮಾಧ್ಯಮಗಳು ನೈಜಾಂಶದ ವರದಿ ಪ್ರಕಟಿಸಬೇಕೆಂದು ಸೋಮವಾರವಷ್ಟೇ ಆಸ್ಟ್ರೇಲಿಯಾ ಮನವಿ ಮಾಡಿಕೊಂಡಿತ್ತು.
ಸಂಬಂಧಿತ ಮಾಹಿತಿ ಹುಡುಕಿ