ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತೀಯರಿಗೆ ಆಸ್ಟ್ರೇಲಿಯಾವೇ ಹೆಚ್ಚು ಸುರಕ್ಷಿತ! (Racism | Oz-Indian | Indian is thrashed | Sydney)
Bookmark and Share Feedback Print
 
ಒಂದೆಡೆ ಆಸ್ಟ್ರೇಲಿಯಾದಲ್ಲಿ ಭಾರತೀಯರ ಮೇಲೆ ಜನಾಂಗೀಯ ದಾಳಿ ಮುಂದುವರಿಯುತ್ತಿದ್ದು, ಭಾರತೀಯರು ಆತಂಕ ಪಡುತ್ತಿದ್ದಾರೆ. ಮತ್ತೊಂದೆಡೆ ಭಾರತೀಯರಿಗೆ ಭಾರತಕ್ಕಿಂತ ಆಸ್ಟ್ರೇಲಿಯಾವೇ ಹೆಚ್ಚು ಸುರಕ್ಷಿತ ಎಂದು ಆಸೀಸ್ ಪೊಲೀಸರು ತಿಳಿಸಿದ್ದಾರೆ!

ಭಾರತೀಯರು ಆಸ್ಟ್ರೇಲಿಯಾದಲ್ಲಿ ಭಾರತಕ್ಕಿಂತ ಹೆಚ್ಚು ಸುರಕ್ಷಿತರು ಎಂದು ವಿಕ್ಟೋರಿಯಾದ ಮುಖ್ಯ ಪೊಲೀಸ್ ಆಯುಕ್ತ ಸಿಮನ್ ಓವರ್‌ಲ್ಯಾಂಡ್ ಹೇಳಿದ್ದಾರೆ.

ಭಾರತೀಯ ಮೂಲದ ನಿತಿನ್ ಗಾರ್ಗ್ ಹತ್ಯೆ ಸೇರಿದಂತೆ ಭಾರತೀಯ ಮೂಲದವರ ಮೇಲೆ ಅಲ್ಲಿ ನಡೆಯುತ್ತಿರುವ ಹಲ್ಲೆ ವಿರುದ್ಧ ಭಾರತ ಪದೇ, ಪದೇ ಎಚ್ಚರಿಕೆ ನೀಡುತ್ತಿದೆ. ಭಾರತೀಯರ ಮೇಲೆ ನಡೆಯುತ್ತಿರುವ ಹಲ್ಲೆಗಳನ್ನು ತಡೆಯಲು ಮೊದಲು ಕ್ರಮ ಕೈಗೊಳ್ಳಿ ಎಂದು ಎಚ್ಚರಿಕೆ ನೀಡುತ್ತಲೇ ಬಂದಿರುವ ನಡುವೆ ಭಾರತೀಯರ ಮೇಲಿನ ಹಲ್ಲೆ ಮುಂದುವರಿದಿದೆ. ಏತನ್ಮಧ್ಯೆ ಭಾರತೀಯರಿಗೆ ಆಸ್ಟ್ರೇಲಿಯಾವೇ ಹೆಚ್ಚು ಸುರಕ್ಷಿತ ಎಂಬ ಅಚ್ಚರಿಯ ಹೇಳಿಕೆಯನ್ನೂ ನೀಡಿದೆ.
ಸಂಬಂಧಿತ ಮಾಹಿತಿ ಹುಡುಕಿ