ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಮೆರಿಕ: ಸಾಕ್ಷ್ಯ ಹೇಳಲು ಫಾರೂಕ್ ತಂದೆಗೆ ಸೂಚನೆ (America | Blast | Farooq | Obama)
Bookmark and Share Feedback Print
 
ಕ್ರಿಸ್‌ಮಸ್ ದಿನದಂದು ಅಮೆರಿಕದ ವಿಮಾನ ಸ್ಫೋಟಿಸಲು ಯತ್ನಿಸಿದ್ದ ಆರೋಪ ಎದುರಿಸುತ್ತಿರುವ ನೈಜೀರಿಯಾದ ಪ್ರಜೆ ಉಮರ್ ಫಾರೂಕ್ ತಂದೆಗೆ ಅಮೆರಿಕದ ಪ್ರಮುಖ ಕಾಂಗ್ರೆಸ್ ಸಮಿತಿ ಮುಂದೆ ಸಾಕ್ಷ್ಯ ನುಡಿಯಲು ಸೂಚಿಸಲಾಗಿದೆ.

ಸೆನೆಟ್‌ನ ವಿದೇಶಾಂಗ ವ್ಯವಹಾರಗಳ ಸಮಿತಿಯ ಅಧ್ಯಕ್ಷ ಸೆನೆಟರ್ ಜಾನ್ ಕೆರ್ರಿ ಅವರು ಈ ನಿಟ್ಟಿನಲ್ಲಿ ನಿವೃತ್ತ ಬ್ಯಾಂಕರ್ ಆಗಿರುವ ಅಬ್ದುಲ್ ಮುತಲ್ಲಾಬ್ ತಂದೆ ಅಲ್ ಹಾಜಿ ಉಮರ್ ಅವರಿಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ.

ಮುತಲ್ಲಾಬ್ ಪುತ್ರ ಡಿಸೆಂಬರ್ 25ರಂದು ಡೆಟ್ರಾಯಿಟ್‌ಗೆ ಬರುತ್ತಿದ್ದ ಪ್ರಯಾಣಿಕರಿದ್ದ ನಾರ್ತ್‌ವೆಸ್ಟ್ ಏರ್‌ಲೈನ್ಸ್ ವಿಮಾನ ಸ್ಫೋಟಿಸಲು ವಿಫಲ ಯತ್ನ ನಡೆಸಿದ್ದ.

ಅಮೆರಿಕದಲ್ಲಿ ಬಿಗಿ ಭದ್ರತೆಯ ನಡುವೆಯೂ ನೈಜೀರಿಯಾದ ಶಂಕಿತ ಉಗ್ರ ಅಮೆರಿಕದ ವಿಮಾನ ಸ್ಫೋಟಿಸಲು ವಿಫಲ ಯತ್ನ ನಡೆಸಿದ ಪ್ರಕರಣದ ವಿರುದ್ಧ ಅಧ್ಯಕ್ಷ ಬರಾಕ್ ಒಬಾಮಾ ಅಸಮಾಧಾನ ವ್ಯಕ್ತಪಡಿಸಿ, ಇದು ದೇಶದ ಗುಪ್ತಚರ ಇಲಾಖೆಯ ವೈಫಲ್ಯವಾಗಿದ್ದು, ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.
ಸಂಬಂಧಿತ ಮಾಹಿತಿ ಹುಡುಕಿ