ವಜ್ರವನ್ನು ಕಳ್ಳಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ಭಾರತದ ಸುಮಾರು 33ಮಂದಿಯನ್ನು ಚೀನಾ ಬಂಧಿಸಿದ್ದು, ಈ ಸಂಬಂಧ ಚೀನಾದಲ್ಲಿರುವ ಭಾರತೀಯ ಅಧಿಕಾರಿಗಳು ಪೂರ್ಣವಾದ ಮಾಹಿತಿಯನ್ನು ನೀಡುವಂತೆ ಭಾರತ ವಿನಂತಿ ಮಾಡಿಕೊಂಡಿದೆ.
ಬಂಧಿತರಾಗಿರುವ ಭಾರತೀಯರ ಕುರಿತು ನೈಜಾಂಶ ಹಾಗೂ ಪೂರ್ಣ ಪ್ರಮಾಣದ ವರದಿಯನ್ನು ಕಳುಹಿಸಿಕೊಡುವಂತೆ ಚೀನಾದಲ್ಲಿರುವ ಭಾರತದ ರಾಯಭಾರಿ ಜೈಶಂಕರ್ ಅವರಲ್ಲಿ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಅವರು ಕೋರಿದ್ದಾರೆ.
ಶೆನ್‌ಜೆನ್ ನಗರದಲ್ಲಿ ಶುಕ್ರವಾರ ವಜ್ರವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ 33ಭಾರತೀಯರು ಸೇರಿದಂತೆ 50ಮಂದಿಯನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿರುವುದಾಗಿ ಚೀನಾ ಮಾಧ್ಯಮವೊಂದು ಸೋಮವಾರದ ವರದಿಯಲ್ಲಿ ತಿಳಿಸಿತ್ತು.