ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಇನ್ನು 3 ವರ್ಷಗಳಲ್ಲಿ ಪಾಕಿಸ್ತಾನ ತಾಲಿಬಾನ್ ವಶ? (Pakistan | Taliban | America | London)
Bookmark and Share Feedback Print
 
ಮುಂಬರುವ ದಿನಗಳಲ್ಲಿ ಪಾಕಿಸ್ತಾನ ಮತ್ತಷ್ಟು ಇಸ್ಲಾಮಿಕ್ ರಾಷ್ಟ್ರವಾಗಲಿದ್ದು, ಅದೇ ಕಾಲಕ್ಕೆ ಅಮೆರಿಕ ವಿರೋಧಿ ಭಾವನೆ ಕೂಡ ಅಲ್ಲಿನ ಜನರಲ್ಲಿ ದುಪ್ಪಟ್ಟಾಗಲಿದೆ ಎಂದು ಲಂಡನ್ ಮೂಲದ ಚಿಂತಕರ ಚಾವಡಿಯೊಂದು ಅಭಿಪ್ರಾಯಪಟ್ಟಿದೆ.

ಇನ್ನು ಮುಂದಿನ ಮೂರು ವರ್ಷಗಳಲ್ಲಿ ಪಾಕಿಸ್ತಾನವನ್ನು ತಾಲಿಬಾನ್ ತನ್ನ ವಶಕ್ಕೆ ತೆಗೆದುಕೊಂಡರೂ ಕೂಡ ಅಚ್ಚರಿಪಡಬೇಕಾಗಿಲ್ಲ. ಅಲ್ಲದೆ, ಅಣ್ವಸ್ತ್ರ ಹೊಂದಿಯೂ ವಿಫಲವಾದ ಜಗತ್ತಿನ ಮೊದಲ ದೇಶ ಎಂಬ ಕುಖ್ಯಾತಿಗೂ ಪಾಕಿಸ್ತಾನ ಒಳಗಾಗಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಬುಡಕಟ್ಟು ಪ್ರದೇಶಗಳಲ್ಲಿ ಪಾಕ್ ಮತ್ತು ಅಮೆರಿಕ ಮಿಲಿಟರಿ ಪಡೆ ತಾಲಿಬಾನ್, ಅಲ್ ಖಾಯಿದಾ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವುದನ್ನು ತೀವ್ರವಾಗಿ ಆಕ್ಷೇಪಿಸುತ್ತ ಬಂದಿರುವ ಉಗ್ರರು, ಇತ್ತೀಚೆಗೆ ನಿರಂತರವಾಗಿ ಬಾಂಬ್ ದಾಳಿ ನಡೆಸುತ್ತ ಬಂದಿವೆ. ಅಲ್ಲದೆ ಪಾಕಿಸ್ತಾನದ ಬುಡಕಟ್ಟು ಪ್ರದೇಶದಲ್ಲಿ ಅಮೆರಿಕದ ವಿರುದ್ಧ ಜನರನ್ನು ಎತ್ತಿಕಟ್ಟುವಲ್ಲಿ ಯಶಸ್ವಿಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ