ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹೈಟಿಯಲ್ಲಿ ಭಾರೀ ಭೂಕಂಪ: ಸಾವಿರಾರು ಬಲಿ? (powerful earthquak | Haiti | US | United Nations)
Bookmark and Share Feedback Print
 
PTI
ಕಳೆದ 200 ವರ್ಷಗಳಲ್ಲಿಯೇ ಕಂಡರಿಯದ ಭಾರೀ ಭೂಕಂಪ ಹೈಟಿಯಲ್ಲಿ ಮಂಗಳವಾರ ಸಂಭವಿಸಿದ ಪರಿಣಾಮ ನ್ಯಾಷನಲ್ ಅರಮನೆ, ವಿಶ್ವಸಂಸ್ಥೆ ಶಾಂತಿಧೂತ ಕಟ್ಟಡ ಹಾಗೂ ಹಲವಾರು ಕಟ್ಟಡಗಳು ಕುಸಿದಿದ್ದು, ಸಾವಿರಾರು ಮಂದಿ ಸಾವಿಗೀಡಾಗಿರಬಹುದೆಂದು ಶಂಕಿಸಲಾಗಿದೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳವಾರ ಮುಂಜಾನೆ 7.0ರಷ್ಟು ತೀವ್ರತೆಯ ಪ್ರಬಲ ಭೂಕಂಪ ರಿಕ್ಟರ್ ಮಾಪನದಲ್ಲಿ ದಾಖಲಾಗಿದ್ದು, ಈ ಭೂಕಂಪ ಹೈಟಿ ನಗರವನ್ನು ನಡುಗಿಸಿದೆ ಎಂದು ವಿಶ್ವಸಂಸ್ಥೆ ಅಧಿಕಾರಿಗಳು ವಿವರಿಸಿದ್ದಾರೆ. ಭೂಕಂಪನದಿಂದ ದೇಹಗಳೆಲ್ಲಾ ರಸ್ತೆಯಲ್ಲಿ ಬಿದ್ದಿರುವುದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಭೂಕಂಪನದಿಂದಾಗಿ ಸಂಪರ್ಕ ಸಂಪೂರ್ಣವಾಗಿ ಹದಗೆಟ್ಟಿದೆ. ಅಲ್ಲದೇ ಭೂಕಂಪದಿಂದ ಸಂಭವಿಸಿದ ಪರಿಣಾಮದ ಸ್ಪಷ್ಟ ಚಿತ್ರಣ ಇನ್ನಷ್ಟೇ ಲಭ್ಯವಾಗಬೇಕಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹಲವಾರು ಪ್ರದೇಶಗಳಲ್ಲಿನ ವಿದ್ಯುತ್, ದೂರವಾಣಿ ಸಂಪರ್ಕ ಕಡಿತಗೊಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ