ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತದ ಗಗನಯಾನಿಗಳು ಬಾಹ್ಯಾಕಾಶಕ್ಕೆ: ರಷ್ಯಾ (India | Russia | Masco | ISRO)
Bookmark and Share Feedback Print
 
ಭಾರತ 2013ರಲ್ಲಿ ರಷ್ಯಾದ ಬಾಹ್ಯಾಕಾಶ ನೌಕೆಯನ್ನು ಬಳಸಿಕೊಂಡು ಇಬ್ಬರು ಗಗನಯಾತ್ರಿಗಳನ್ನು ಕಳುಹಿಸುವ ಮೂಲಕ ಮೊದಲ ಚಾಲಿತ ಬಾಹ್ಯಾಕಾಶ ಹಾರಾಟವನ್ನು ಆರಂಭಿಸಲಿದೆ ಎಂದು ವರದಿಗಳು ತಿಳಿಸಿವೆ.

ಇದಕ್ಕಾಗಿ ಇಸ್ರೋ ಬದಲು ಸೋಯಜ್ ಬಾಹ್ಯಾಕಾಶ ನೌಕೆಯನ್ನು ರಷ್ಯಾದಿಂದ ಖರೀದಿಸಬೇಕಾಗುವುದಲ್ಲದೆ ರಷ್ಯನ್ ಕಮಾಂಡರ್ ಮೂಲಕ ತನ್ನ ಗಗನಯಾತ್ರಿಗಳಿಗೆ ತರಬೇತಿಯನ್ನು ನೀಡಬೇಕಾಗುವುದು. ಹಲವು ದಿನಗಳ ಕಾಲ ಸಾಗಲಿರುವ ಈ ಸ್ವತಂತ್ರ ಬಾಹ್ಯಾಕಾಶ ಹಾರಾಟದಲ್ಲಿ ರಷ್ಯದ ಗಗನ ಯಾತ್ರಿ ಇಬ್ಬರು ಚಾಲಕ ಯಾನಿಗಳನ್ನು ಒಳಗೊಳ್ಳುವ ತಂಡದ ನೇತೃತ್ವವನ್ನು ವಹಿಸುವರು.

ಭಾರತೀಯ ಗಗನ ಯಾತ್ರಿಗಳು ಅಂತಾರಾಷ್ಟ್ರೀಯ ವ್ಯೋಮ ಕೇಂದ್ರ ಅಭಿಯಾನದಲ್ಲಿ ಒಳಗೊಳ್ಳುವುದಿಲ್ಲ ಎಂದು ರಷ್ಯಾದ ಬಾಹ್ಯಾಕಾಶ ಸಂಸ್ಥೆಯ ಉಪ ಮುಖ್ಯಸ್ಥ ವಿಶಾಲಿ ದವಿದೋವ್ ಅವರನ್ನು ಉಲ್ಲೇಖಿಸಿ ರೇಡಿಯೋ ವರದಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಭಾರತ, ರಷ್ಯಾ, ಮಾಸ್ಕೋ, ಗಗನಯಾನ