ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕೆನಡಾದಿಂದ ಅಮೆರಿಕಕ್ಕೆ ಉಗ್ರರು ನುಸುಳಲಿದ್ದಾರೆ ಎಚ್ಚರ: ವರದಿ (al-Qaeda | Terrorists | US | Canada | Yemeni)
Bookmark and Share Feedback Print
 
ಕೆನಡಾದಿಂದ ಅಮೆರಿಕಕ್ಕೆ ಉಗ್ರರು ಅಮೆರಿಕಕ್ಕೆ ಕಾಲಿಡುವ ಸಾಧ್ಯತೆ ಇರುವುದಾಗಿ ಗುಪ್ತಚರ ಇಲಾಖೆ ನೀಡಿರುವ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಕೆನಡಾದ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯೆಮೆನ್‌ನಲ್ಲಿ ತರಬೇತುಗೊಂಡು ಸುಮಾರು 20ಮಂದಿ ಉಗ್ರರು ಕೆನಡಾದಿಂದ ಉತ್ತರ ಅಮೆರಿಕಾದೊಳಕ್ಕೆ ಕಾಲಿಡುವ ಸಾಧ್ಯತೆ ಇರುವುದಾಗಿ ಬ್ರಿಟಿಷ್ ಮತ್ತು ಅಮೆರಿಕದ ಗುಪ್ತಚರ ವರದಿ ಕೆನಡಾಕ್ಕೆ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಬಿಗು ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಕೆನಾಡ ಟೆಲಿವಿಷನ್ ವರದಿ ಹೇಳಿದೆ.

ಅಲ್ಲದೆ ಕೆನಡಾದ ಮೂಲಕ ಮತ್ತೊಂದು ಗುಂಪಿನ ಉಗ್ರರು ನುಸುಳುವ ಸಾಧ್ಯತೆ ಇರುವ ಕುರಿತು ಕೆನಡಾ ಗುಪ್ತಚರ ಇಲಾಖೆಗೂ ಬಲವಾದ ಪುರಾವೆ ದೊರೆತಿರುವುದಾಗಿಯೂ ವರದಿ ವಿವರಿಸಿದೆ. ಭದ್ರತೆ ಕುರಿತು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪ್ರಧಾನಿ ಸ್ಟೇಫನ್ ಹಾರ್ಪರ್ ಅವರು ಸೋಮವಾರ ರಾತ್ರಿ ಹಿರಿಯ ಸಚಿವರೊಂದಿಗೆ ಮಾತುಕತೆ ನಡೆಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕೆನಡಾ, ಟೋರಾಂಟೊ, ಅಮೆರಿಕ, ಯೆಮೆನ್