ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹೈಟಿ ಭೂಕಂಪಕ್ಕೆ 1ಲಕ್ಷ ಜನ ಬಲಿ:ಪ್ರಧಾನಿ (Haiti | Earthquake | Death toll)
Bookmark and Share Feedback Print
 
ಎರಡು ಶತಮಾನಗಳಲ್ಲಿ ಭೀಕರ ಎನ್ನಬಹುದಾದ ಭೂಕಂಪಕ್ಕೆ ಸುಮಾರು ಒಂದು ಲಕ್ಷ ಜನರು ಬಲಿಯಾಗಿರಬಹುದು ಎಂದು ಹೈಟಿಯ ಪ್ರಧಾನಿ ಆತಂಕ ವ್ಯಕ್ತಪಡಿಸಿದ್ದಾರೆ.

ಭೂಕಂಪದ ಹೊಡೆತಕ್ಕೆ ಶಾಲಾ ಕಾಲೇಜು, ಕಚೇರಿಗಳು ಮನೆಗಳು ಸಾವಿರಾರು ಸಂಖ್ಯೆಯಲ್ಲಿ ಕುಸಿದಿದ್ದರಿಂದ ಹಲವಾರು ಜನ ಕಟ್ಟಡದ ಅವಶೇಷದೊಳಗೆ ಸಿಲುಕಿರಬಹುದು ಎಂದು ಮೂಲಗಳು ತಿಳಿಸಿವೆ.

ಭೂಕಂಪದ ನಂತರ ಮೊದಲ ಬಾರಿಗೆ ಮಾಧ್ಯಮಗಳಿಗೆ ಸಂದರ್ಶನ ನೀಡಿದ ಪ್ರಧಾನಿ, 7.0 ರಿಯಾಕ್ಟರ್ ಮಾಪಕದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಹೈಟಿ ರಾಜಧಾನಿ ಪೋರ್ಟ್-ಒ-ಪ್ರಿನ್ಸ್ ಉಹೆಗೂ ಮೀರಿ ಸಂಪೂರ್ಣ ನಾಶವಾದಂತಾಗಿದೆ ಎಂದು ಕಂಬನಿ ಮಿಡಿದಿದ್ದಾರೆ.

ಸಂಸತ್ ಭವನ, ಸರಕಾರಿ ಕಚೇರಿಗಳು ಶಾಲಾ ಕಾಲೇಜು ಹಾಗೂ ಆಸ್ಪತ್ರೆ ಕಟ್ಟಡಗಳು ಸಂಪೂರ್ಣವಾಗಿ ಕುಸಿದಿವೆ. ಭೀಕರ ಭೂಕಂಪದಲ್ಲಿ ಸುಮಾರು ಒಂದು ಲಕ್ಷ ಜನ ಮೃತರಾಗಿರುವ ಶಂಕೆಯಿದೆ ಎಂದು ಪ್ರಧಾನಿ ತಿಳಿಸಿದ್ದಾರೆ
ಸಂಬಂಧಿತ ಮಾಹಿತಿ ಹುಡುಕಿ