ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತೀಯನ ಹತ್ಯೆ:ಮೂವರು ಆರೋಪಿಗಳ ಬಂಧನ (Murder | Sikh | Arrest | London)
Bookmark and Share Feedback Print
 
ಮಹಿಳೆಯೊಬ್ಬಳ ಬ್ಯಾಗ್‌ನ್ನು ಕಿತ್ತುಕೊಳ್ಳಲು ಯತ್ನಿಸಿದ ಇಬ್ಬರು ಕಳ್ಳರನ್ನು ತಡೆಯಲು ಪ್ರಯತ್ನಿಸಿದ ಭಾರತೀಯ ಮೂಲದ ಸಿಖ್ ವ್ಯಕ್ತಿಯನ್ನು ಹತ್ಯೆಗೈದ ಆರೋಪದ ಮೇಲೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಕಳೆದ ಶುಕ್ರವಾರದಂದು ಲಂಡನ್‌ನ ಪೂರ್ವಿಯ ಭಾಗದ ಬಾರ್ಕಿಂಗ್ ಸ್ಟೇಶನ್‌ ಬಳಿ ಮಹಿಳೆಯ ಬ್ಯಾಗ್‌ನ್ನು ಕಸಿದುಕೊಳ್ಳಲು ಯತ್ನಿಸಿದ ಆರೋಪಿಗಳನ್ನು 31 ವರ್ಷ ವಯಸ್ಸಿನ ಸುಖ್‌ವಿಂದರ್‌ಸಿಂಗ್ ತಡೆದಾಗ ಘರ್ಷಣೆಯಲ್ಲಿ ಆರೋಪಿಗಳು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದರು.

ಸಿಂಗ್, ಕಟ್ಟಡ ನಿರ್ಮಾಣ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದು,ಕಳೆದ 10 ವರ್ಷಗಳಿಂದ ಬ್ರಿಟನ್‌ನಲ್ಲಿ ವಾಸಿಸುತ್ತಿದ್ದರು. ಅವರನ್ನು ಕೂಡಲೇ ರಾಯಲ್ ಲಂಡನ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಕೊನೆಯುಸಿರೆಳೆದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕೊಲೆ ಸಿಖ್, ಬಂಧನ, ಲಂಡನ್