ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್ ತಾಲಿಬಾನ್ ಮುಖ್ಯಸ್ಥ ಹತನಾಗಿಲ್ಲ:ವರದಿ (US airstrike | Drone attack | Pakistan)
Bookmark and Share Feedback Print
 
ಅಮೆರಿಕದ ದ್ರೋಣ್ ದಾಳಿಯಲ್ಲಿ ತೆಹರಿಕ್-ಎ-ತಾಲಿಬಾನ್ ಪಾಕಿಸ್ತಾನದ ಮುಖ್ಯಸ್ಥ ಹಕೀಮುಲ್ಲಾ ಮೆಹಸೂದ್ ಸಾವನ್ನಪ್ಪಿದ್ದಾರೆ ಎನ್ನುವ ವರದಿಗಳನ್ನು ಸ್ಥಳೀಯ ನಿವಾಸಿಗಳು ತಳ್ಳಿಹಾಕಿದ್ದಾರೆ.

ಉತ್ತರ ವಜೀರಿಸ್ತಾನದ ಪ್ರಮುಖ ಪಟ್ಟಣವಾದ ಮಿರಾನ್‌ಶಾ ಬಾಸಲ್‌ಕೋಟ್ ಗ್ರಾಮದ ಮೇಲೆ, ಅಮೆರಿಕ ಕನಿಷ್ಠ ನಾಲ್ಕು ಕ್ಷಿಪಣಿಗಳ ದಾಳಿ ನಡೆಸಿದಾಗ ಕೆಲ ಪ್ರಮುಖ ಕಮಾಂಡರ್‌ಗಳು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಉಗ್ರರನ್ನು ಗುರಿಯಾಗಿಸಿಕೊಂಡ ನಡೆಸಿದ ದಾಳಿಯಲ್ಲಿ ಮನೆ ಸಂಪೂರ್ಣ ನಾಶವಾಗಿದೆ. ಆದರೆ ತಾಲಿಬಾನ್‌ ಪಾಕಿಸ್ತಾನದ ಮುಖ್ಯಸ್ಥ ಮೆಹಸೂದ್ ಸಾವನ್ನಪ್ಪಿದ್ದಾರೆ ಎನ್ನುವ ವರದಿಗಳನ್ನು ಸ್ಥಳೀಯರು ತಿರಸ್ಕರಿಸಿದ್ದಾರೆ.

ದಾಳಿಯ ನಂತರ ಉಗ್ರರು ಪ್ರದೇಶವನ್ನು ಸುತ್ತುವರಿದು, ಜನರು ಘಟನಾ ಸ್ಥಳಕ್ಕೆ ತೆರಳದಂತೆ ತಡೆದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಯುಎಸ್ ದ್ರೋಣ ದಾಳಿ, ಪಾಕಿಸ್ತಾನ