ಪಾಕಿಸ್ತಾನದ ಬುಡಕಟ್ಟು ಪ್ರದೇಶದಲ್ಲಿನ ಮಿಲಿಟರಿ ಪಡೆಯನ್ನು ಹಿಂದಕ್ಕೆ ಕರೆಯಿಸಿಕೊಳ್ಳಬೇಕೆಂದು ಆಗ್ರಹಿಸಿರುವ ಮಾಜಿ ಕ್ರಿಕೆಟಿಗ, ರಾಜಕಾರಣಿ ಇಮ್ರಾನ್ ಖಾನ್, ತಾಲಿಬಾನ್ ಜೊತೆ ಪಾಕ್ ಸರ್ಕಾರ ಮಾತುಕತೆ ಮುಂದಾಗಬೇಕು ಎಂದಿರುವ ಅವರು ಇಲ್ಲದಿದ್ದರೆ ಮಹಾವಿಪತ್ತು ಎದುರಿಸಬೇಕಾದಿತು ಎಂದು ಎಚ್ಚರಿಕೆ ನೀಡಿದ್ದಾರೆ.
ಅಫ್ಘಾನಿಸ್ತಾನ ಗಡಿಪ್ರದೇಶದಲ್ಲಿ ಅಮೆರಿಕ ಮತ್ತು ಪಾಕಿಸ್ತಾನ ಮಿಲಿಟರಿ ಪಡೆಗಳು ಕಾನೂನು ಬಾಹಿರವಾಗಿ ನಡೆದುಕೊಳ್ಳುತ್ತಿವೆ ಎಂದು ಆರೋಪಿಸಿದ್ದಾರೆ. ಇದರಿಂದಾಗಿ ಸ್ಥಳೀಯರಲ್ಲಿ ಅಮೆರಿಕ ವಿರೋಧಿ ಧೋರಣೆ ಹೆಚ್ಚಲವಾಗಲು ಕಾರಣವಾಗಿದೆ ಎಂದರು.
ಅಮೆರಿಕ ಉಗ್ರರ ವಿರುದ್ಧ ಬಳಸುತ್ತಿರುವ ಡ್ರೋನ್ ಕಾರ್ಯಾಚರಣೆ ಅತ್ಯಂತ ಹೇಯಕರವಾದದ್ದು ಎಂದು ತೆಹ್ರಿಕ್ ಇ ಇನ್ಸಾಫ್ ಪಕ್ಷದ ಮುಖಂಡರಾಗಿರುವ ಖಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆ ನಿಟ್ಟಿನಲ್ಲಿ ಈ ಸಮಸ್ಯೆ ಪರಿಹಾರಕ್ಕೆ ಇರುವ ಏಕೈಕ ಮಾರ್ಗವೆಂದರೆ ಸರ್ಕಾರ ತಾಲಿಬಾನ್ ಉಗ್ರರ ಜೊತೆ ಮಾತುಕತೆಗೆ ಮುಂದಾಗಬೇಕು ಎಂದು ಲಂಡನ್‌ನಲ್ಲಿ ಚಿಂತಕರ ಚಾವಡಿಯಲ್ಲಿ ಮಾತನಾಡುತ್ತ ತಿಳಿಸಿದ್ದಾರೆ.